ತಿರುವನಂತಪುರಂ: ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್ ಮತ್ತು ರಾತ್ರಿ ಕಫ್ರ್ಯೂ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಾಪ್ತಾಹಿಕ ಕೋವಿಡ್ ಪರಿಶೀಲನಾ ಸಭೆಯಲ್ಲಿ ನಿರ್ಬಂಧಗಳನ್ನು ನಿರ್ಧರಿಸಲಾಯಿತು.
ರಾಷ್ಟ್ರೀಯ ಆರೋಗ್ಯ ತಜ್ಞರೊಂದಿಗಿನ ಸಭೆಯಲ್ಲಿ, ರಾಜ್ಯ ಸರ್ಕಾರವು ಕೋವಿಡ್ ತಡೆಗಟ್ಟುವಿಕೆಗಾಗಿ ಕಠಿಣ ನಿಯಂತ್ರಣಗಳನ್ನು ತೆಗೆದುಹಾಕುವ ಮೂಲಕ ಲಸಿಕೆಯನ್ನು ಬಲಪಡಿಸಲು ಆದ್ಯತೆ ನೀಡುವಂತೆ ಸೂಚಿಸಿತ್ತು.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿ ಸಂಪೂರ್ಣ ಲಾಕ್ ಡೌನ್ ಮಾಡುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಸಂದರ್ಭದಲ್ಲಿ, ಭಾನುವಾರದ ಲಾಕ್‍ಡೌನ್ ಮತ್ತು ರಾತ್ರಿ ಕಫ್ರ್ಯೂ ನ್ನು ತೆಗೆದುಹಾಕಲಾಗುವುದು ಎಂಬುದು ಸಾಮಾನ್ಯ ನಿರೀಕ್ಷೆಯಾಗಿತ್ತು. ರಾತ್ರಿಯ ಕಫ್ರ್ಯೂನ ವೈಜ್ಞಾನಿಕತೆಯನ್ನು ಪ್ರಶ್ನಿಸಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಈ ಹಿಂದೆ ಟೀಕೆ ವ್ಯಕ್ತಪಡಿಸಿದ್ದರು.