ನವದೆಹಲಿ: ಯಾವುದೇ ಹೆಸರಿನಿಂದ ಪರಿಚಿತವಾಗಿರುವ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ನೀಡಲಾಗಿದೆ. ತೆರಿಗೆ ದರವು ಅದರ ಆಕಾರವನ್ನು ಅವಲಂಬಿಸಿ ಬದಲಾಗುವುದಿಲ್ಲ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ.
ಸುತ್ತಿನ ಆಕಾರದ ಪಾಪಡ್ ಅನ್ನು ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಆದರೆ ಚದರ ಆಕಾರದ ಪಾಪೆಡ್ ತೆರಿಗೆಯನ್ನು ಆಕರ್ಷಿಸುತ್ತದೆ ಎಂದು ಉದ್ಯಮಿ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ ನಂತರ ಕೇಂದ್ರಿಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಸ್ಪಷ್ಟನೆ ನೀಡಿದೆ.
ಸುತ್ತಿನ ಆಕಾರದ ಪಾಪಡ್ ಗೆ ಜಿಎಸ್ ಟಿಯಿಂದ ವಿನಾಯಿತಿ ನೀಡಲಾಗಿದೆ ಮತ್ತು ಚದರ ಆಕಾರದ ಪಾಪೆಡ್ ಗೆ ತೆರಿಗೆ ಇದೆಯೇ? ಇದರ ಬಗ್ಗೆ ಯಾರಾದರೂ ಸಲಹೆ ನೀಡುವಂತೆ ಆರ್ ಪಿಜಿ ಎಂಟರ್ ಪ್ರೈಸಸ್ ಮುಖ್ಯಸ್ಥ ಗೋಯಂಕಾ ಮಂಗಳವಾರ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿಬಿಐಸಿ, ಯಾವುದೇ ಹೆಸರಿನಿಂದ ಪರಿಚಿತವಾಗಿರುವ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ನೀಡಲಾಗಿದೆ. ಪಾಪಡ್ ಆಕಾರದ ಮೇಲೆ ಜಿಎಸ್ ಟಿ ಹಾಕುವುದಿಲ್ಲ, ಈ ಕುರಿತ ನೋಟಿಫಿಕೇಷನ್ ಸಿಬಿಐಸಿ ವೆಬ್ ಸೈಟ್ ನಲ್ಲಿ ಲಭ್ಯವರಿವುದಾಗಿ ಟ್ವೀಟ್ ಮಾಡಿದೆ.