ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಚಿನ್ಮಯ ಮಿಷನ್ ಕೇರಳ ರಾಜ್ಯ ಘಟಕ ಮುಖ್ಯಸ್ಥ ಹಾಗೂ ಚಿನ್ಮಯ ವಿದ್ಯಾಲಯ ಕಾಸರಗೋಡಿನ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಮಾತನಾಡಿ, ಕೋವಿಡ್ ಮಹಾಮಾರಿಯಿಂದ ಹೆಚ್ಚಿನ ಸಂಕಷ್ಟ ಅನುಭವಿಸುವವರಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಾಗಿದ್ದು, ತಮ್ಮ ಭೌತಿಕ ತರಗತಿಗಳಿಂದ ವಂಚಿತರಾಗಿ ಗುರುಗಳು, ಗೆಳೆಯರನ್ನು ಸಂಪರ್ಕಿಸಲಾರದೆ ಅತಂತ್ರ ಮನೋಭಾವ ಎದುರಿಸುವಂತಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಚಿನ್ಮಯ ಮಿಷನ್ ಕೊಡಮಾಡುವ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು
ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರನ್ನು ಗುಲಾಬಿ ಹೂಗಳನ್ನು ನೀಡಿ ಗೌರವಿಸಿದರು. ಕುಮಾರಿ ಶಿವಾಂಗಿ ಶಿಕ್ಷಕರ ದಿನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಅಧ್ಯಾಪಕರಿಗೆ ರಸಪ್ರಶ್ನೆಗಳನ್ನು ಏರ್ಪಡಿಸಿ ರಂಜಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಚಾರಿ ಅಖಿಲೇಶ್ ಚೈತನ್ಯ, ವಿದ್ಯಾಲಯದ ಪ್ರಾಂಶುಪಾ¯ ಸಂಗೀತ ಪ್ರಭಾಕರನ್ , ಉಪ ಪ್ರಾಂಶುಪಾಲೆ ಪದ್ಮಾವತಿ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ, ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು
ಪ್ರಜ್ಞ ಸ್ವಾಗತಿಸಿದರು. ರಶ್ಮಿ ಮುರಳೀಧರನ್ ಕಾರ್ಯ ಕ್ರಮ ನಿರೂಪಿಸಿದರು. ಅರ್ಜುನ್ ವಂದಿಸಿದರು