ತಿರುವನಂತಪುರಂ: ಶೋರ್ನೂರ್ ನ ಮಾಜಿ ಶಾಸಕ ಮತ್ತು ಸಿಪಿಎಂ ನಾಯಕ ಪಿ. ಕೆ. ಶಶಿ ಕೆಟಿಡಿಸಿ ಅಧ್ಯಕ್ಷರಾಗಿ ನೇಮಕಮಾಡಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ ವೇಣು ಅವರು ಹೊಸ ಅಧ್ಯಕ್ಷರು ಮತ್ತು ಮಂಡಳಿಯ ಸದಸ್ಯರನ್ನು ನೇಮಿಸಿದ್ದಾರೆ.
ಡಿವೈಎಫ್‍ಐ ಮಹಿಳಾ ನಾಯಕರ ದೂರಿನ ಮೇರೆಗೆ ಪಿಕೆ ಶಶಿಯನ್ನು ಕೆಳಗಿಳಿಸಲಾಯಿತು ಮತ್ತು ಬಳಿಕ ಅವರನ್ನು ಮರು ನೇಮಕಮಾಡಲಾಯಿತು. ಇದರ ನಂತರ ಯಾವುದೇ ಇತರ ಸವಲತ್ತುಗಳನ್ನು ನೀಡಲಾಗಿಲ್ಲ. ಪಿಣರಾಯಿ ಅವರ ಕಟ್ಟಾ ಬೆಂಬಲಿಗರಾಗಿರುವ ಶಶಿ ಅವರಿಗೆ ಮುಖ್ಯಮಂತ್ರಿಯ ನೇರ ಹಸ್ತಕ್ಷೇಪದಿಂದ ಹೊಸ ಜವಾಬ್ದಾರಿ ನೀಡಲಾಗಿದೆ. ಸಿಪಿಎಂ ನಾಯಕ ಕೆ ವಿಜಯಕುಮಾರ್ ನಿರ್ಗಮಿತ ಅಧ್ಯಕ್ಷರಾಗಿದ್ದರು.