ಭೂಮಿಗೆ ಅಪ್ಪಳಿಸುವ ಬಗ್ಗೆ ಸಂಶೋಧಕರು ಎಚ್ಚರಿಕೆ ನೀಡಿದ್ದು, ಭೂಮಿ ಮೇಲೆ ಹಬ್ಬಿರುವ ಇಂಟರ್‌ನೆಟ್ ಜಾಲ ನಿಂತು ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದು ಡಿಜಿಟಲ್ ಯುಗ, ಎಲ್ಲಾ ಇಂಟರ್‌ನೆಟ್ ಮೇಲೆ ಅವಲಂಬಿತ. ಕೇವಲ ಇಂಟರ್‌ನೆಟ್ ಸ್ಲೋ ಆದಾಗಲೇ ಜನ ಚಡಪಡಿಸುತ್ತಾರೆ ಹೀಗಿದ್ದಾಗ ಇಂಟರ್‌ನೆಟ್ ಸಂಪೂರ್ಣವಾಗಿ ಸ್ತಗಿತವಾದರೆ ಕಥೆ ಏನು? ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ನಿಜವಾದ್ರೆ ಏನಾಗಬಹುದು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಸೂರ್ಯನ ಆಂತರಿಕ ಕ್ರಿಯೆಗಳಿಂದ ಆತನ ಮೇಲ್ಮೈ ಪ್ರತಿಕ್ಷಣ ಕುದಿಯುತ್ತಿರುತ್ತೆ.
ಹೀಗೆ ಸೂರ್ಯನ ಒಳಗೆ ಅಪಾರ ಪ್ರಮಾಣದ ಹೈಡ್ರೋಜೆನ್, ಹೀಲಿಯಂ ಸೇರಿದಂತೆ ಹಲವು ಧಾತುಗಳಿವೆ. ಇವು ಸಮ್ಮಿಲನ ಕ್ರಿಯೆಯಲ್ಲಿ ತೊಡಗಿದಾಗ ಸಿಕ್ಕಾಪಟ್ಟೆ ಶಾಖ ಬಿಡುಗಡೆಯಾಗುತ್ತೆ. ಭೂಮಿಗೆ ಓಝೋನ್ ಪದರದ ರಕ್ಷಣೆ ಇರದೇ ಇದ್ದಿದ್ದರೆ ಮಾನವರು ಬಿಡಿ ಭೂಮಿಯ ಮೇಲೆ ಒಂದು ಜೀವಿಯೂ ಉಳಿಯಲು ಸಾಧ್ಯವಿಲ್ಲ.
ಸೌರ ಚಂಡಮಾರುತ ಎಂದರೇನು..?
ಭೂಮಿ ಕಾಂತಕ್ಷೇತ್ರ ಸೂರ್ಯನಿಂದ ಹೊರಬರುವ ಅಪಾಯಕಾರಿ ವಿಕಿರಣದಿಂದ ಮಾನವರನ್ನು ರಕ್ಷಿಸುತ್ತದೆ. ಈ ಕಿರಣಗಳು ಹೆಚ್ಚಿನ ವೇಗದಲ್ಲಿ ಭೂಮಿ ಕಡೆ ಬಂದಾಗ ಕಾಂತೀಯ ಮೇಲ್ಮೈಗೆ ಡಿಕ್ಕಿಯಾಗುತ್ತವೆ. ಬಳಿಕ ಈ ಸೌರ ಮಾರುತದ ಕಣಗಳು ಧ್ರುವಕ್ಕೆ ಚಲಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಸೌರ ಚಂಡಮಾರುತ ಸಂಭವಿಸುತ್ತದೆ. ಸೌರ ಜ್ವಾಲೆ ಭೂಮಿಗೆ ಅಪ್ಪಳಿಸಿದ್ರೆ ಇದರ ಪ್ರಭಾವ 12 ಗಂಟೆಕಾಲ ಉಳಿಯಬಹುದು. ಕೆಲ ದಿನಗಳ ನಂತರ ಸೌರ ಜ್ವಾಲೆಯಿಂದ ಹಾನಿಗೆ ಒಳಗಾಗಿದ್ದ ಭೂಮೇಲ್ಮೈ ಚೇತರಿಸಿಕೊಳ್ಳುತ್ತದೆ. ಆದ್ರೆ ಭೂಮಿಗೆ ಬಡಿಯುವ ಸೌರ ಚಂಡಮಾರುತ ಮಾಡುವ ಸಮಸ್ಯೆ ಒಂದೆರಡಲ್ಲ. ಜಿಪಿಎಸ್ ನೇವಿಗೇಶನ್, ಮೊಬೈಲ್‌ಗಳ ಸಿಗ್ನಲ್ ಹಾಗೂ ಸ್ಯಾಟಲೈಟ್ ಅಂದರೆ ಉಪಗ್ರಹಗಳ ಮೇಲೂ ವ್ಯತಿರಿಕ್ತ ಪ್ರಭಾವ ಬೀರಿ ಹಾಳು ಮಾಡುತ್ತದೆ.
ಸಂಗೀತಾ ನೀಡಿದ ಎಚ್ಚರಿಕೆ..!
ಸೌರ ಜ್ವಾಲೆ ಅಥವಾ ಸೌರ ಚಂಡಮಾರುತಗಳ ರೌದ್ರಾವತಾರದ ಬಗ್ಗೆ ಅಮೆರಿಕದ ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರೊಬ್ಬರು ಪ್ರಬಂಧ ಮಂಡಿಸಿದ್ದಾರೆ. ಸಂಗೀತಾ ಅಬ್ದು ಜ್ಯೋತಿ ಮಂಡಿಸಿದ ಸಂಶೋಧನಾ ಪ್ರಬಂಧ ಈಗ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಸಂಗೀತಾ ತಮ್ಮ ಪ್ರಬಂಧದಲ್ಲಿ ತಿಳಿಸಿರುವಂತೆ ಭವಿಷ್ಯದಲ್ಲಿ ಭೂಮಿ ದೊಡ್ಡ ಗಂಡಾಂತರಕ್ಕೆ ಸಜ್ಜಾಗಬೇಕಿದೆ. ಸೌರ ಜ್ವಾಲೆ ಭೀಕರವಾಗಿ ಭೂಮಿಗೆ ಅಪ್ಪಳಿಸಲಿದ್ದು, ಈ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ ಎಂದಿದ್ದಾರೆ. ಇಲ್ಲವಾದರೆ ಇಡೀ ಭೂಮಿ ಮೇಲೆ ಇಂಟರ್‌ನೆಟ್ ನಿಂತು ಹೋಗಲಿದೆ ಎಂದು ತಮ್ಮ ಪ್ರಬಂಧದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸೂರ್ಯ ಕನಲಿದನೇ:
ಹೀಗೆ ಸೂರ್ಯ ರೌದ್ರಾವತಾರ ತೋರಿಸುತ್ತಿರುವುದು ಇದೇ ಮೊದಲೇನಲ್ಲ. ಭೀಕರ 'ಸೌರ ಜ್ವಾಲೆ'ಗೆ ದೊಡ್ಡ ಇತಿಹಾಸವಿದೆ. 1859, 1921ರಲ್ಲಿ ಭೀಕರ ಸೌರ ಚಂಡಮಾರುತ ಬೀಸಿತ್ತು. ಇತ್ತೀಚೆಗೆ 1989ರಲ್ಲಿ ಸೂರ್ಯನ ಕೋಪಕ್ಕೆ ಮಾನವ ತತ್ತರಿಸಿದ್ದ. 1989ರಲ್ಲಿ ಭೂಮಿಗೆ ಬಡಿದಿದ್ದ ಸೌರ ಜ್ವಾಲೆಗೆ ಪವರ್ ಗ್ರಿಡ್‌ಗಳೇ ನಾಶವಾಗಿ ಹೋಗಿದ್ದವು. ಕೆನಡಾದಲ್ಲಿ ವಿದ್ಯುತ್ ಸಂಪರ್ಕವೇ ನಿಂತುಹೋಗಿತ್ತು. ಆದರೆ ಈ ಹಿಂದೆ ಸಂಭವಿಸಿದ್ದ ಇಂತಹ ದುರಂತ ಸಮಯದಲ್ಲಿ ಡಿಜಿಟಲ್ ಯುಗ ಇರಲಿಲ್ಲ. ಈಗ ಎಲ್ಲಾ ಇಂಟರ್‌ನೆಟ್ ಮೇಲೆ ಅವಲಂಬಿತವಾಗಿದೆ. ಪರಿಸ್ಥಿತಿ ಹೀಗಿರುವಾಗ ಸೂರ್ಯ ಮುನಿಸಿಕೊಂಡರೆ ಬಹುದೊಡ್ಡ ಆಪತ್ತ ಎದುರಾಗೋದು ಗ್ಯಾರಂಟಿ.
ನಕ್ಷತ್ರಗಳ ಹುಟ್ಟು:
ಭೂಮಿ ಕಾಂತಕ್ಷೇತ್ರ ಸೂರ್ಯನಿಂದ ಹೊರಬರುವ ಅಪಾಯಕಾರಿ ವಿಕಿರಣದಿಂದ ಮಾನವರನ್ನು ರಕ್ಷಿಸುತ್ತದೆ. ಈ ಕಿರಣಗಳು ಹೆಚ್ಚಿನ ವೇಗದಲ್ಲಿ ಭೂಮಿ ಕಡೆ ಬಂದಾಗ ಕಾಂತೀಯ ಮೇಲ್ಮೈಗೆ ಡಿಕ್ಕಿಯಾಗುತ್ತವೆ. ಬಳಿಕ ಈ ಸೌರ ಮಾರುತದ ಕಣಗಳು ಧ್ರುವಕ್ಕೆ ಚಲಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಸೌರ ಚಂಡಮಾರುತ ಸಂಭವಿಸುತ್ತದೆ. ಸೌರ ಜ್ವಾಲೆ ಭೂಮಿಗೆ ಅಪ್ಪಳಿಸಿದ್ರೆ ಇದರ ಪ್ರಭಾವ 12 ಗಂಟೆಕಾಲ ಉಳಿಯಬಹುದು. ಕೆಲ ದಿನಗಳ ನಂತರ ಸೌರ ಜ್ವಾಲೆಯಿಂದ ಹಾನಿಗೆ ಒಳಗಾಗಿದ್ದ ಭೂಮೇಲ್ಮೈ ಚೇತರಿಸಿಕೊಳ್ಳುತ್ತದೆ. ಆದ್ರೆ ಭೂಮಿಗೆ ಬಡಿಯುವ ಸೌರ ಚಂಡಮಾರುತ ಮಾಡುವ ಸಮಸ್ಯೆ ಒಂದೆರಡಲ್ಲ. ಜಿಪಿಎಸ್ ನೇವಿಗೇಶನ್, ಮೊಬೈಲ್‌ಗಳ ಸಿಗ್ನಲ್ ಹಾಗೂ ಸ್ಯಾಟಲೈಟ್ ಅಂದರೆ ಉಪಗ್ರಹಗಳ ಮೇಲೂ ವ್ಯತಿರಿಕ್ತ ಪ್ರಭಾವ ಬೀರಿ ಹಾಳು ಮಾಡುತ್ತದೆ.
ಬ್ರಹ್ಮಾಂಡದ ಉಗಮವಾಗಿ ಸುಮಾರು 1375 ಕೋಟಿ ವರ್ಷವಾಗಿದೆ. 1375 ಕೋಟಿ ವರ್ಷದಲ್ಲಿ ಬಿಲಿಯನ್ ಲೆಕ್ಕದಲ್ಲಿ ಗ್ಯಾಲಕ್ಷಿಗಳು ಜನ್ಮತಾಳಿವೆ. ಪ್ರತಿಯೊಂದು ಗ್ಯಾಲಕ್ಸಿಯಲ್ಲೂ ಮತ್ತೊಂದಿಷ್ಟು ಬಿಲಿಯನ್ ನಕ್ಷತ್ರಗಳು, ಗ್ರಹಗಳು ಕೂಡ ಹರಡಿವೆ. ಈ ಸಮೂಹದಲ್ಲಿ ಸೌರಮಂಡಲವೂ ಒಂದು. ಹೀಗೆ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ನಕ್ಷತ್ರಗಳ ಹುಟ್ಟು ಹಾಗೂ ಬೆಳವಣಿಗೆ ಕೋಟಿ ಕೋಟಿ ವರ್ಷಗಳ ಪ್ರಕ್ರಿಯೆ. ಅದು ದಿಢೀರ್ ಎಂದು ಸಂಭವಿಸುವುದಿಲ್ಲ. ದಟ್ಟ ಧೂಳಿನ ಮೋಡಗಳು ಗುರತ್ವದ ಬಲದಿಂದ ಒಂದುಗೂಡಿ, ನಂತರ ಮೋಡದ ಒಳಗೆ ಗುರತ್ವದ ಬಲದಿಂದ ಶಾಖ ಏರ್ಪಡುತ್ತದೆ. ಬಿಸಿ ಹೆಚ್ಚಾಗುತ್ತಾ ಸಾಗಿ ಬೈಜಿಕ ಸಮ್ಮಿಲ ಕ್ರಿಯೆ ಆರಂಭವಾಗುತ್ತದೆ.
ನಕ್ಷತ್ರಗಳು ಮೊದಲಿಗೆ ಸಾಮಾನ್ಯ ಮೋಡ ಅಥವಾ ಅನಿಲ ಗ್ರಹದಂತೆ ಗೋಚರಿಸಿದರೂ ಅಲ್ಲಿ ಬಿಸಿ ಹೆಚ್ಚಾಗಿ ಬೈಜಿಕ ಸಮ್ಮಿಲ ಆರಂಭವಾಗುತ್ತದೆ. ಇದನ್ನ ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿಯನ್ನ ಅನುಸರಿಸುತ್ತವೆ. ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆಯಿಂದ ಆಗುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ (Nuclear fusion) ಕ್ರಿಯೆ ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಆಧರಿಸಿರುತ್ತದೆ.