ಕಾಸರಗೋಡು: ಸೌರಶಕ್ತಿ ಉತ್ಪಾದನೆ ಹೆಚ್ಚಳ ಗುರಿಯಾಗಿಸಿ ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಪಿ.ಎಂ.ಕುಸುಂ ಯೋಜನೆಗೆ ಅರ್ಜಿ ಕೋರಲಾಗಿದೆ.
ಕೃಷಿಕರು ಸ್ವಂತ ಬಂಜರು ಜಾಗದಲ್ಲಿ ಯಾ ಕೃಷಿಗೆ ಯಾವುದೇ ರೀತಿ ಅರ್ಹವಲ್ಲದ ಜಾಗದಲ್ಲಿ 2 ರಿಂದ 8 ಎಕ್ರೆ ಜಾಗದಲ್ಲಿ ಸೌರಶಕ್ತಿ ತಾಣ ಸ್ಥಾಪಿಸಿ ಆದಾಯ ಪಡೆಯಲು ಈ ಮೂಲಕ ಅವಕಾಶಗಳಿವೆ. 2 ಮಾದರಿಗಳಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ.
ಮಾದರಿ 1: ಬಂಡವಾಳ ಪೂರ್ಣಭರೂಪದಲ್ಲಿ ಕೃಷಿಕರದ್ದಾಗಿದ್ದು, ಸ್ವಂತ ವೆಚ್ಚದಲ್ಲಿ ಸೌರಶಕ್ತಿ ಘಟಕ ಯಥಾಸಮಯಕ್ಕೆ ನಿರ್ಮಿಸಿ ಅದರಿಂದ ಉತ್ಪಾದಿಸುವ ಸೌರಶಕ್ತಿಗೆ ಯೂನಿಟೊಂದಕ್ಕೆ 3 ರೂ.50 ಪೈಸೆ ದರದಲ್ಲಿ ನೀಡಲಾಗುವುದು.
ಮಾದರಿ 2: ಬಂಡವಾಳ ಕೆ.ಎಸ್.ಇ.ಬಿ. ವಹಿಸಲಿದೆ. ಕೃಷಿಕರ ಬಂಜರು ಯಾ ಯಾವುದೇ ರೀತಿಯ ಕೃಷಿಗೆ ಅರ್ಹವಲ್ಲದ ಜಾಗದಲ್ಲಿ ವಿದ್ಯುನ್ಮಂಡಳಿ ಘಟಕ ಸ್ಥಾಪಿಸಲಿದೆ. ಇಲ್ಲಿ ಉತ್ಪಾದಿಸುವ ಸೌರಶಕ್ತಿಗೆ ಯೂನಿಟೊಂದಕ್ಕೆ 10 ಪೈಸೆದರದಲ್ಲಿ 25 ವರ್ಷಕ್ಕೆ ಜಾಗಕ್ಕೆ ಬಾಡಿಗೆ ನೀಡಲಾಗುವುದು.
ಕೃಷಿಕರು ಉತ್ಪಾದಿಸುವ ಸೌರಶಕ್ತಿಗೆ ಮುಂಗಡವಾಗಿ ನಿಗದಿಪಡಿಸಿರುವ ತಾರಿಫ್ ಪ್ರಕಾರ ಯಾ ಟೆಂಡರ್ ಮೂಲಕದ ತಾರಿಫ್ ಪ್ರಕಾರ ಕೆ.ಎಸ್.ಇ.ಬಿ. ಖರೀದಿ ನಡೆಸಲಿದೆ. 3.5 ರಿಂದ 4 ಎಕ್ರೆ ಜಾಗದಲ್ಲಿ ಒಂದು ಮೆಗಾವಾಟ್ ಸೌರಶಕ್ತಿ ಘಟಕ ನಿರ್ಮಿಸುವ ಅಗತ್ಯವಿದೆ. ಯೋಜನೆ ಪ್ರಕಾರ ಜಾಗ ನೀಡಿದರೆ ಒಂದು ಎಕ್ರೆ ಜಾಗದಿಂದ 25 ಸಾವಿರ ರೂ. ತನಕ ಪ್ರತಿಫಲ ಕೃಷಿಕರಿಗೆ ಲೀಸ್ ಪ್ರಕಾರ ಲಭಿಸಲಿದೆ.
ಕೃಷಿಕರು ವ್ಯಕ್ತಿಗತ ರೀತಿ ಯಾ ಗುಂಪಾಗಿ/ ಸಹಕಾರಿ ರೀತಿ/ ಪಂಚಾಯತ್/ ಫಾರ್ಮರ್ ಪೆÇ್ರಡ್ಯೂಸರ್ ಆರ್ಗನೈಸೇಷನ್/ ವಾಟರ್ ಯೂಸರ್ ಆರ್ಗನೈಸೇಷನ್ ಈ ರೀತಿ ಕೂಡ ಯೋಜನೆಯಲ್ಲಿ ಭಾಗಿಗಳಾಗಬಹುದು. ಹೆಚ್ಚುವರಿ ಮಾಹಿತಿಗಳಿಗಾಗಿ:ಸಹಾಯಕ ಪ್ರಧಾನ ಇಂಜಿನಿಯರ್(9446008345), ಕಾರ್ಯಕಾರಿ ಇಂಜಿನಿಯರ್(9496018443), ಸಹಾಯಕ ಇಂಜಿನಿಯರ್(9496011431.)