ಕಾಸರಗೋಡು: ಅರೋಗ್ಯರಂಗದಲ್ಲಿ ನಂಬರ್ ವನ್ ಎಂದು ಸ್ವತ: ವ್ಯಾಖ್ಯಾನಿಸುತ್ತಿದ್ದ ಕೇರಳ, ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ಪರಾಜಯಗೊಂಡಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಅವರು ಬಿಜೆಪಿ ರಾಷ್ಟ್ರೀಯ ಸಮಿತಿ ಜಾರಿಗೊಳಿಸಿರುವ ಹೆಲ್ತ್ ವಾಲೆಂಟಿಯರ್ ಯೋಜನೆಯನ್ವಯ ಕಾಸರಗೋಡು ಮಂಡಲ ಸಮಿತಿ ಜಿಲ್ಲಾಸಮಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಮ್ಮ ವೈಫಲ್ಯ ಮುಚ್ಚಿಹಾಕಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಕೋವಿಡ್ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದ ಕೇರಳ. ಇಂದು ಕೋವಿಡ್ ನಿಯಂತ್ರಿಸಲಾಗದೆ ಜನರನ್ನು ಆತಂಕಕ್ಕೆ ತಳ್ಳಿದೆ. ಕೋವಿಡ್ ನಿಯಂತ್ರಿಸಲು ಬಿಜೆಪಿಯ ಹೆಲ್ತ್ ವಾಲೆಂಟಿಯರ್ಸ್ ಯೋಜನೆ ಪ್ರಮುಖ ದೌತ್ಯ ವಹಿಸಿಕೊಂಡಿದ್ದು, ಕೋವಿಡ್ ಮಾನದಂಡ ಪಾಲನೆಯೊಂದಿಗೆ ಕಾರ್ಯನಿರತವಾಗಲಿರುವುದಾಗಿ ತಿಳಿಸಿದರು.
ಮಧೂರು ಜನಾರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ, ಅರುಣ್ ಕುಮಾರ್ ಸಿ.ಕೆ ತರಗತಿ ನಡೆಸಿದರು. ಈ ಸದರ್ಭ ಕೀಯೂರ್ ಅಳಿವೆಯಲ್ಲಿ ನಡೆದ ದೋಣಿ ಅಪಘಾತದ ಸಂದರ್ಭ ಕಾರ್ಮಿಕರನ್ನು ರಕ್ಷಿಸಿದ ಬಬೀಶ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಕೀಲ ಸದಾನಂದ ರೈ, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ.ಆರ್, ಸುಕುಮಾರ್ ಕುದ್ರೆಪ್ಪಾಡಿ, ಉಮಾ ಕಡಪ್ಪುರ ಉಪಸ್ಥಿತರಿದ್ದರು.