HEALTH TIPS

ಓದುವಾಗಲೇ ಲವ್​, ನಂತರ ಮದ್ವೆ, ಒಟ್ಟಿಗೆ ಸರ್ಕಾರಿ ಕೆಲಸ, ಒಂದೇ ಕಡೆ ಪೋಸ್ಟಿಂಗ್​: ದಂಪತಿಯ ಥ್ರಿಲ್ಲಿಂಗ್​ ಲೈಫ್​ಸ್ಟೋರಿ!

                 ಆದಿರಪ್ಪಳ್ಳಿ ಇದು ಕೇರಳ ದಂಪತಿಯ ಜೀವನ ಪಯಣದ ಅಪರೂಪದ ಕತೆ. ಒಟ್ಟಿಗೆ ಓದುವ ಮೂಲಕ ಬದುಕಿನ ಜಂಟಿ ಪಯಣ ಆರಂಭಿಸಿದ ಈ ಜೋಡಿ, ಪ್ರೀತಿಸಿ, ಮದುವೆಯಾಗಿ, ಇದೀಗ ಒಟ್ಟಿಗೆ ಸರ್ಕಾರಿ ಕೆಲಸ ತೆಗೆದುಕೊಂಡು, ಕೆಲಸದಲ್ಲೂ ಒಂದೇ ಕಡೆ ಇರುವ ಮೂಲಕ ಬದುಕಿನುದ್ದಕ್ಕೂ ಜತೆಯಾಗಿಯೇ ಪಯಣ ಮುಂದುವರಿಸಿದ್ದಾರೆ.

               ಜಾಕ್ಸನ್​ ಮತ್ತು ರಿಯಾ ಎಂಬುವರೇ ಆ ಅಪರೂಪದ ಜೋಡಿ. ಇಬ್ಬರು ಕೇರಳದ ಕೊಣ್ಣಕ್ಕುಜಿ ಅರಣ್ಯ ವಲಯದ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಸರ್ಕಾರಿ ಕೆಲಸಕ್ಕಾಗಿ ತೆರಬೇತಿ ಪಡೆಯುವ ಸಮಯದಲ್ಲಿ ಪರಿಚಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೇಮಾಂಕುವಾರ ಮದುವೆ ಆಗಿದ್ದಾರೆ. ಮದುವೆಯಾದ ಎರಡೇ ತಿಂಗಳಲ್ಲಿ ಇಬ್ಬರಿಗೂ ಕೊಣ್ಣಕ್ಕುಜಿ ಅರಣ್ಯ ವಲಯದಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಸಿಕ್ಕಿದೆ. ಇದೀಗ ಕೆಲಸ ಸಿಕ್ಕಿ ಒಂದೂವರೆ ವರ್ಷಗಳಾಗಿದ್ದು, ಇಬ್ಬರು ಒಟ್ಟಿಗೆ ಸರ್ಕಾರಿ ಸೇವೆ ಮುಂದುವರಿಸಿದ್ದಾರೆ.

          ಕೆಲಸದ ವೇಳೆ ದಂಪತಿ ಅನೇಕ ಥ್ರಿಲ್ಲಿಂಗ್​ ಮತ್ತು ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಅನೇಕ ಬಾರಿ ಕಾಡುಪ್ರಾಣಿಗಳ ಸಂಭವನೀಯ ದಾಳಿಯಿಂದ ಬಚಾವ್​ ಆಗಿದ್ದಾರೆ. ಒಮ್ಮೆ ಆನೆಗಳ ಹಿಂಡನ್ನು ಹಿಮ್ಮೆಟ್ಟಿಸಿ ಹೋಗುವಾಗ ಒಂದು ಆನೆ ಅವರ ವಿರುದ್ಧವೇ ತಿರುಗಿ ದಾಳಿ ಮಾಡಲು ಮುಂದಾಗಿತ್ತು. ಈ ಕ್ಷಣವನ್ನು ನೆನೆದರೆ ಈಗಲೂ ಭಯವಾಗುತ್ತದೆ ಎಂದು ದಂಪತಿ ಘಟನೆಯನ್ನು ಮೆಲಕು ಹಾಕಿದರು.

            ಅಂದಹಾಗೆ ಜಾಕ್ಸನ್​ ಮತ್ತು ರಿಯ ಕೇರಳದ ಛಲಕ್ಕುಡಿ ಪಿಎಸ್​ಸಿ ಕೋಚಿಂಗ್​ ಸೆಂಟರ್​ನಲ್ಲಿ ಒಟ್ಟಿಗೆ ಅಧ್ಯಯನ ನಡೆಸಿದರು. ಅರಣ್ಯ ಇಲಾಖೆಯ ಬೀಟ್​ ಅರಣ್ಯಾಧಿಕಾರಿ ಪರೀಕ್ಷೆಗೆ ಇಬ್ಬರು ಪರೀಕ್ಷೆ ಬರೆದಿದ್ದರು. ಮದುವೆಯಾದ ಬಳಿಕ ಇಬ್ಬರಿಗೂ ಏಕಕಾಲದಲ್ಲಿ ಅಪಾಯನ್ಮೆಂಟ್​ ಲೆಟರ್​ ಬಂದಿತ್ತು. ಇದೀಗ ಇಬ್ಬರು ಅರಣ್ಯ ರಕ್ಷಕರಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries