ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಸ್ವರ್ಗದ ಖಾಸಗಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಮೃಗಾಸ್ಪತ್ರೆ ಉಪ ಕೇಂದ್ರವನ್ನು ಸ್ವರ್ಗ ಜಂಕ್ಷನ್ ನಲ್ಲಿರುವ ಸೇವಾ ಗ್ರಾಮ ( ಟಿ.ವಿ ಶೆಡ್) ಕಟ್ಟಡಕ್ಕೆ ಸ್ಥಳಾಂತರಿಸಿ ಉದ್ಘಾಟನೆ ನಡೆಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ. ಎಸ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿಧ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ , ಸದಸ್ಯರಾದ ರಾಮಚಂದ್ರ ಎಂ , ಎಸ್.ಬಿ ನರಸಿಂಹ ಪೂಜಾರಿ, ಮುಂದಾಳುಗಳಾದ ಪಿ.ಯಸ್ ಕಡಂಬಳಿತ್ತಾಯ,ನಾರಾಯಣ ರೈ ,ವಿವೇಕಾನಂದ ಬಿ.ಕೆ ,ಶ್ರೀನಿವಾಸ ಪೆರಿಕ್ಕಾನ,ರವಿ ಕೆ,ಚಂದ್ರಾವತಿ ಎಂ, ಮೃಗಾಸ್ಪತ್ರೆ ಅಧಿಕಾರಿ ಇಜಾಸ್ ಮೊಹಮ್ಮದ್, ವೀರಪ್ಪ ಗೌಡ ಮೊಳಕ್ಕಾಲು ಮೊದಲಾದವರು ಉಪಸ್ಥಿತರಿದ್ದರು. ವಾರ್ಡ್ ಪ್ರತಿನಿಧಿ ರಾಮಚಂದ್ರ ಎಂ ಸ್ವಾಗತಿಸಿ ಮೃಗಾಸ್ಪತ್ರೆ ಅಧಿಕಾರಿ ಇಜಾಸ್ ಮೊಹಮ್ಮದ್ ವಂದಿಸಿದರು.