ಸಾಧನಾ ಪಥದಲ್ಲಿ ಬಂದೆರಗುವ ಎಡರು-ತೊಡರುಗಳಿಗೆ ಬಲಿಯಾಗದೆ ಗಮ್ಯದೆಡೆಗಿನ ಪಯಣ
ಯಶಸ್ವಿಯಾದರೆ ಗೆಲುವು ಖಚಿತ ಎಂಬುದು ಹಿರಿಯರ ಮರ‍್ಗರ‍್ಶನ. ಆದರೆ ನಮಗೆ ಬಹುತೇಕ
ಸಂರ‍್ಭ ದಾರಿಯ ಮಧ್ಯೆ ಎದುರಾಗುವ ಗೊಂದಲ, ಸವಾಲುಗಳನ್ನು ಬಿಡಿಸಿಕೊಳ್ಳಲಾಗದೆ ಸಿಲುಕಿ
ಪರದಾಡುವ ಸಾಧ್ಯತೆಗಳೇ ಹೆಚ್ಚು. ಮತ್ತದು ಅಷ್ಟು ಸುಲಭ ಸಾಧ್ಯವೂ ಅಲ್ಲ.
ಕಲಾಯಾತ್ರೆಯನ್ನು ತಪಸ್ಸಾಗಿ ಸ್ವೀಕರಿಸಿ ವ್ಯೆಯುಕ್ತಿಕ ಸವಾಲುಗಳಿಗೆ ಅಲ್ಲಲ್ಲಿ ಪರಿಹಾರ
ಕಲ್ಪಿಸುತ್ತ ಮುನ್ನಡೆಯುತ್ತಿರುವ ಸೋಮನಾಥ ಶೆಟ್ಡಿ ಇವರು ತೊಡಗಿಸಿಕೊಂಡಿರುವುದು
ಬಹುಮುಖಿ ಆಯಾಮಗಳ ಕಲಾ ಜಗತ್ತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರಳ ವ್ಯಕ್ತಿತ್ವದ
ಹಿಂದೆ ಸಾಗುತ್ತಿರುವ ರ‍್ತಮಾನದ ಸವಾಲುಗಳಿಗೆ ಉತ್ತರಕಂಡುಕೊಳ್ಳುವ ಧಾವಂತವೂ ಇದೆ. ಸಮರಸ
ಸುದ್ದಿಯ ಅತಿಥಿಯಾಗಿ ಸಂವಾದದ ಮೂಲಕ ತಮ್ಮ ಸಾಧನಾ ಪಥದ ಮಾಹಿತಿ ನೀಡಿದ್ದಾರೆ.
ವೀಕ್ಷಿಸಿ...ಪ್ರೋತ್ಸಾಹಿಸಿ.
ಸಮರಸ ಸಂವಾದ: ಬಹುಮುಖ ಪ್ರತಿಭಾ ಸಂಪನ್ನತೆ ಬದುಕಿನ ಸರ‍್ಥಕತೆ: ಅತಿಥಿ : ಸೋಮನಾಥ ಶೆಟ್ಟಿ ಮಂಗಲ್ಪಾಡಿ
0
ಸೆಪ್ಟೆಂಬರ್ 20, 2021
Tags