ಕಾಸರಗೋಡು: ಗ್ರಾಮ ಪಂಚಾಯತ್ ಗಳ ಆಡಳಿತೆ ನಿರ್ವಹಣೆ ಕ್ರಮಗಳು, ಸೇವೆಗಳು ಸಸೂತ್ರ ಮತ್ತು ನಿರಾತಂಕವಾಗಿ ಸಾರ್ವಜನಿಕರಿಗೆ ಲಭಿಸುವ ನಿಟ್ಟಿನಲ್ಲಿ "ಸಿಟಿಝನ್" ಆಪ್ ಸಿದ್ಧಗೊಂಡಿದೆ.
ಪಂಚಾಯತ್ ಇಲಾಖೆಯ ಸಹಭಾಗಿತ್ವದೊಂದಿಗೆ ಇನ್ಫಾ ರ್ಮೇಷನ್ ಕೇರಳ ಮಿಷನ್ ಸಿದ್ಧಪಡಿಸಿರುವ ಅತ್ಯಧುನಿಕ ಸಾಫ್ಟ್ ವೇರ್ ಅಪ್ಲಿಕೇಷನ್ ಆಗಿರುವ ಸಂಯೋಜಿತ ಪ್ರಾದೇಶಿಕ ಆಡಳಿತೆ ಸಂಪ್ರದಾಯ(ಐ.ಎಲ್.ಜಿ.ಎಂ.ಎಸ್.)ನ ಅಂಗವಾಗಿ ಪ್ರತ್ಯೇಕವಾಗಿ ಈ ಆಪ್ ತಯಾರುಗೊಂಡಿದೆ.
ಸೆ.3ರಂದು ಸಿಟಿಝನ್ ಪೆÇೀರ್ಟಲ್ ಉದ್ಘಾಟನೆಗೊಳ್ಳಲಿದೆ. ಆನ್ ಲೈನ್ ರೂಪದಲ್ಲಿ ಸ್ಥಳೀಯಾಡಳಿತ, ಗ್ರಾಮಾಭಿವೃದ್ಧಿ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಉದ್ಘಾಟಿಸುವರು.