ಪೆರ್ಲ: ಕೇರಳ ಸಾಕ್ಷರತಾ ಮಿಷನ್ ಆಶ್ರಯದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ನೇತೃತ್ವದಲ್ಲಿ 2019-21ನೇ ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆ ಬರೆದು ಉತ್ತೀರ್ಣರಾದವರನ್ನು ಅಭಿನಂದಿಸುವ ಕಾರ್ಯಕ್ರಮ ಪಂಚಾಯತು ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಗ್ರಾ. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯತ್ ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತು ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ, ಬ್ಲಾಕ್ ಪಂ.ಸದಸ್ಯರುಗಳಾದ ಬಟ್ಟು ಶೆಟ್ಟಿ ಕಾಟುಕುಕ್ಕೆ, ಕೆ.ಪಿ.ಆನಿಲ್ ಕುಮಾರ್, ಪಂ.ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಯಶ್ರೀ ಎ.ಕುಲಾಲ್ , ಸೌದಾಭಿ ಹನೀಫ್, ಪಂ.ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ, ಮಹೇಶ್ ಭಟ್, ಕುಸುಮಾವತಿ.ಬಿ, ಉಷಾ, ಇಂದಿರಾ, ರೂಪವಾಣಿ ಆರ್.ಭಟ್, ಆಶಾಲತಾ, ಆಯಿಷಾ ಎ.ಎ, ಬ್ಲಾಕ್ ಪ್ರೇರಕ್ ಪರಮೇಶ್ವರ ನಾಯ್ಕ್, ಪಂಚಾಯತ್ ಪ್ರೇರಕ್ ಅನಂದ ಕುಕ್ಕಿಲ,ಉಪನ್ಯಾಸಕರಾದ ಸುಮಿತ್ರ, ಶೈಲಜಾ, ವಿಜಯ,ನಾರಾಯಣ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೈಯರ್ ಸೆಕೆಂಡರಿ ಪರೀಕ್ಷೆ ಬರೆದು ಉನ್ನತ ಅಂಕ ಗಳಿಸಿದ ರತೀಶ್ ಕುಮಾರ್ ಬಿ,ನಿರ್ಮಲ ಖಂಡಿಗೆ,ಪದ್ಮರಾಜ ಕನ್ನಟಿಕಾನ ಹಾಗೂ ಬ್ಲಾಕ್ ಪಂ.ಸದಸ್ಯ ಕೆ.ಪಿ.ಆನಿಲ್ ಕುಮಾರ್, ಪಂ.ಸದಸ್ಯೆ ಕುಸುಮಾವತಿ ಬಿ.ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಂಚಾಯತು ವತಿಯಿಂದ ಪರೀಕ್ಷೆ ಬರೆದವರಿಗೆ ಅಭಿನಂದನೆ ಸಲ್ಲಿಸಲಾಯಿತು. ಬಾಲಕೃಷ್ಣ ಪ್ರಾರ್ಥನೆಗೈದರು.ಸೆಂಟರ್ ಪ್ರೇರಕ್ ಜಲಜಾಕ್ಷಿ ಪ್ರಸ್ತಾವನೆಗೈದು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆಗೈದರು. ನಿರ್ಮಲ ವಂದಿಸಿದರು.