ಕಾಸರಗೋಡು: ನಗರದ ಚಂದ್ರಗಿರಿ ಜಂಕ್ಷನ್ ಬಳಿ ಸಾರಿಗೆ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಟ್ರಾಫಿಕ್ ಪೊಲೀಸರ ತಂಡ ಅವಲೋಕನ ನಡೆಸಿತು. ಎಂಜಿ ರಸ್ತೆಗೆ ಕಾಞಂಗಾಡಿನಿಂದ ಆಗಮಿಸುವ ರಸ್ತೆ ಸಂಪರ್ಕಿಸುವ ಜಂಕ್ಷನ್ನಲ್ಲಿ ಪ್ರತಿ ನಿತ್ಯ ವಾಹನಗಳ ದಟ್ಟಣೆಯಿಂದ ನಿರಂತರ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತಿದ್ದು, ಇದರಿಂದ ಚಾಲಕರು ಸಂಕಷ್ಟ ಎದುರಿಸಬೇಕಾಗುತ್ತಿದೆ.
ಜಂಕ್ಷಚನ್‍ನಿಂದ ಹಳೇ ಬಸ್ ನಿಲ್ದಾಣ ವರೆಗೆ ರಸ್ತೆ ಅಗಲಗೊಳಿಸುವುದರ ಜತೆಗೆ ಟ್ರಾಫಿಕ್ ವ್ಯವಸ್ಥೆ ಸುಗಮನಗೊಳಿಸಲು ತೀರ್ಮಾನಿಸಲಾಗಿದೆ. ತಂಡ ಸಾಧ್ಯತಾ ಅಧ್ಯಯನ ವರದಿಯನ್ನು ರಸ್ತೆ ಸುರಕ್ಷಾ ಸಮಿತಿಗೆ ಸಲ್ಲಿಸಲಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ರಸ್ತೆ ಸುರಕ್ಷಾ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.ಮೋಟಾರು ಇಲಾಖೆ ಎಂ.ವಿಗಳಾದ ವಿ. ಪ್ರಜಿತ್, ಸಾಜು ಫ್ರಾನ್ಸಿಸ್, ಪಿಡಬ್ಲ್ಯೂಡಿ ಸಹಾಯಕ ಅಭಿಯಂತೆ ವಿ.ಎಸ್ ರಮ್ಯಾ, ಕಾಸರಗೋಡು ಟ್ರಫಿಕ್ ಎಸ್.ಐ ವಿಶ್ವನಾಥ್ ಅವಲೋಕನ ನಡೆಸಿದರು.