ಬದಿಯಡ್ಕ: ಮೊಗೇರ ವಾಟ್ಸಪ್ ಹೆಲ್ಪ್ ಗ್ರೂಪ್ ವತಿಯಿಂದ ಹಿರಿಯ ಸಮಾಜಸೇವಕ ರಾಮಪ್ಪ ಮಂಜೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಒಳಿತಿಗಾಗಿ ನಿರಂತರ ಶ್ರಮಿಸುತ್ತಿರುವ ಅವರು ಹಲವಾರು ವಿಚಾರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಚಿಂತನೆಯೊಂದಿಗೆ ದೀನದಲಿತರ ಕಣ್ಣೀರೊರೆಸುವ ಸಮಾಜ ಸೇವಕ ಎಂಬ ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ನಿಸ್ವಾರ್ಥ ಮನೋಭಾವದಿಂದ ಸಮಾಜಕ್ಕಾಗಿ ದುಡಿದ ಅವರಿಗೆ ಕೇರಳ ಸರ್ಕಾರದ ಅಯ್ಯಂಗಾಳಿ ಪ್ರಶಸ್ತಿ ಹಾಗೂ ದೆಹಲಿಯ ಅಂಬೇಡ್ಕರ್ ಫೆಲೋಶಿಪ್ ಹಾಗೂ ಬುದ್ಧ ಫೆಲೋಶಿಪ್ ಪುರಸ್ಕಾರ ದೊರೆತಿದೆ. ಸೀತಾಂಗೋಳಿ ಕುದ್ರೆಪ್ಪಾಡಿಯ ಪೆರಡಾನಮೂಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಗೇರ ವಾಟ್ಸಪ್ ಹೆಲ್ಪ್ ಗ್ರೂಪ್‍ನ ಅಧ್ಯಕ್ಷ ಪದ್ಮರಾಜ ಕಜಂಪಾಡಿ, ಗೌರವ ಸಲಹೆಗಾರರಾದ ಡಿ. ಶಂಕರ, ಹರಿಶ್ಚಂದ್ರ ಪುತ್ತಿಗೆ, ಕೊರಗಪ್ಪ ಬೆಳ್ಳಿಗೆ, ಪದಾಧಿಕಾರಿಗಳಾದ ಉಮೇಶ್ ಬಂದ್ಯೋಡು, ಸುರೇಶ್ ಬಿ.ಕೆ., ಸಂಜೀವ ಕೆ., ಚಂದ್ರ ಪೊಡಿಪಳ್ಳ, ಜಯ ಮುಕಾರಿಖಂಡ, ಪ್ರದೀಪ್ ಪುತ್ತಿಗೆ, ಬಾಲಕೃಷ್ಣ ಪುದ್ಯೋಡು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.