ನವದೆಹಲಿ: ಕೇರಳದ ಉರಲುಂಗಲ್ ಸೊಸೈಟಿ ಮತ್ತು ಕೋಝಿಕ್ಕೋಡ್ ಕೋ-ಆಪರೇಟಿವ್ ಆಸ್ಪತ್ರೆಯು ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಹಕಾರ ಸಚಿವಾಲಯವು ರಾಜ್ಯಗಳಿಗೆ ಸಹಾಯ ಮಾಡುವ ಮತ್ತು ಅಂತರ್À-ರಾಜ್ಯ ಸಹಕಾರ ಸಂಘಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಅಮಿತ್ ಶಾ ಅವರು ರಾಷ್ಟ್ರೀಯ ಸಹಕಾರಿ ಕಾಂಗ್ರೆಸ್‍ಗೆ ಪ್ರಾಥಮಿಕ ಕೃಷಿ ಗುಂಪುಗಳಿಗೆ ರಾಷ್ಟ್ರೀಯ ನೀತಿಯನ್ನು ತರುವುದಾಗಿ ಹೇಳಿದರು.
ದೇಶದ ಮೊದಲ ಸಹಕಾರ ಸಚಿವಾಲಯದ ಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ದೇಶದ 91 ಶೇ. ಹಳ್ಳಿಗಳಲ್ಲಿ ಸಣ್ಣ ಮತ್ತು ದೊಡ್ಡ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಹೇಳಿದರು.
ಸಹಕಾರ ಚಳುವಳಿಯನ್ನು ಬಲಪಡಿಸುವ, ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ಚೌಕಟ್ಟನ್ನು ರೂಪಿಸುವ ಮತ್ತು ಬಹು-ರಾಜ್ಯ ಸಹಕಾರ ಸಂಘಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ವರ್ಷದ ಜುಲೈನಲ್ಲಿ ಹೊಸ ಸಹಕಾರ ಸಚಿವಾಲಯವನ್ನು ರಚಿಸಲಾಯಿತು. ಅಮಿತ್ ಶಾ ಸಹಕಾರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿ ನಿನ್ನೆ ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಅವರು ಮಾತನಾಡಿದರು.