HEALTH TIPS

ನಿಮ್ಮ ಮಗುವಿಗೂ ನೇಲ್ ಪಾಲಿಶ್ ಹಚ್ಚುತ್ತಿದ್ದೀರಾ? ಹಾಗಾದ್ರೆ ಈ ವಿಚಾರಗಳು ನೆನಪಿರಲಿ

             ಸಾಮಾನ್ಯವಾಗಿ ನೀವು ಮನೆಯಲ್ಲಿರುವ ಸಣ್ಣ ಮಕ್ಕಳು ಕನ್ನಡಿಯ ಮುಂದೆ ನಿಂತು ತಯಾರಾಗುವುದನ್ನು ನೋಡಿರಬೇಕು. ಕೆಲವೊಮ್ಮೆ ತುಟಿಗಳಿಗೆ ಲಿಪ್ಸ್ಟಿಕ್ ಅಥವಾ ಕೈ ಮತ್ತು ಕಾಲಿನ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿ ಖುಷಿ ಪಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ಪೋಷಕರೇ ಅವರಿಗೆ ನೇಲ್ ಪಾಲಿಶ್ ಹಚ್ಚಿ ರೆಡಿ ಮಾಡಿರುತ್ತಾರೆ. ಮಕ್ಕಳು ಮಾಡುವ ಈ ಕೆಲಸ ಮನೆಮಂದಿಗೆ ಮನರಂಜನೆಯ ವಿಷಯವಾಗಬಹುದು. ಆದರೆ ಮೋಜಿಗಾಗಿ ಮಾಡಿದ ಈ ಕೆಲಸವು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?.

            ಹೌದು, ಚಿಕ್ಕ ಮಕ್ಕಳಿಗೆ ನೇಲ್ ಪಾಲಿಶ್ ಹಚ್ಚುವುದು ಎಷ್ಟು ಸುರಕ್ಷಿತ ಮತ್ತು ಹಾಗೆ ಮಾಡುವಾಗ ನೀವು ಯಾವ ವಿಷಯಗಳಿಗೆ ಗಮನ ಕೊಡಬೇಕು ಎಂಬುದನ್ನು ನೀವು ತಿಳಿದುಕೊಳ್ಳುವುದು ಮುಖ್ಯ. ಅದನ್ನು ಇಲ್ಲಿ ನೋಡೋಣ.


           ಚಿಕ್ಕ ಮಕ್ಕಳಿಗೆ ನೇಲ್ ಪಾಲಿಶ್ ಹಚ್ಚುವುದು ಸುರಕ್ಷಿತವೇ?: ಹಾನಿಕಾರಕ ರಾಸಾಯನಿಕಗಳನ್ನು ಅನೇಕ ಉಗುರು ಬಣ್ಣ ಅಥವಾ ನೇಲ್ ಪಾಲಿಶ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಸಣ್ಣ ಮಕ್ಕಳು ತಮ್ಮ ಕೈಗಳನ್ನು ಪದೇ ಪದೇ ಬಾಯಿಗೆ ಹಾಕಿಕೊಳ್ಳುವ ಅಥವಾ ಉಗುರುಗಳನ್ನು ಅಗಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೀಗೆ ಮಾಡಿದಾಗ, ನೇಲ್ ಪಾಲಿಶ್‌ನಲ್ಲಿ ಇರುವ ರಾಸಾಯನಿಕವು ಮಗುವಿನ ಬಾಯಿಯ ಮೂಲಕ ಹೊಟ್ಟೆಯನ್ನು ತಲುಪಬಹುದು. ಇದು ಮುಂದೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಮಕ್ಕಳಿಗಾಗಿ ನೇಲ್ ಪಾಲಿಶ್ ಆರಿಸುವಾಗ, ಯಾವಾಗಲೂ ರಾಸಾಯನಿಕರಹಿತ ನೇಲ್ ಪಾಲಿಶ್ ಆಯ್ಕೆ ಮಾಡಿಕೊಳ್ಳಿ.
               ನೇಲ್ ಪಾಲಿಶ್‌ನಲ್ಲಿರುವ ಯಾವ ರಾಸಾಯನಿಕ ಮಕ್ಕಳ ಆರೋಗ್ಯಕ್ಕೆ ಹೇಗೆ ಹಾನಿ ಮಾಡುವುದು?: ನೇಲ್ ಪಾಲಿಶ್‌ನಲ್ಲಿ ಇರುವ ಹಲವು ರೀತಿಯ ಹಾನಿಕಾರಕ ರಾಸಾಯನಿಕಗಳು ಮಕ್ಕಳ ದೇಹವನ್ನು ಪ್ರವೇಶಿಸುವ ಮೂಲಕ ಮಕ್ಕಳಿಗೆ ಹಾನಿ ಮಾಡಬಹುದು. ಅದು ಹೇಗೆ ಎಂದು ತಿಳಿಯೋಣ 1.ಟೊಲುಯೆನ್: ಈ ರಾಸಾಯನಿಕವನ್ನು ಸಾಮಾನ್ಯವಾಗಿ ನೇಲ್ ಪಾಲಿಶ್‌ನ್ನು ತ್ವರಿತವಾಗಿ ಒಣಗಿಸಲು ಬಳಸಲಾಗುತ್ತದೆ. ಎನ್ಸಿಬಿಐನಲ್ಲಿ ಲಭ್ಯವಿರುವ ಸಂಶೋಧನೆಯ ಪ್ರಕಾರ, ಇದು ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು.
             2. ಫಾರ್ಮಾಲ್ಡಿಹೈಡ್: ಈ ರಾಸಾಯನಿಕಕ್ಕೆ ದೇಹ ಸೇರಿದರೆ, ಲ್ಯುಕೇಮಿಯಾ, ಮೂಳೆ ಮಜ್ಜೆ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳಲ್ಲಿ ಅಸಹಜವಾಗಿ ಬೆಳೆಯುವ ಕ್ಯಾನ್ಸರ್ ಕಣಗಳು ಅಪಾಯವನ್ನು ಹೆಚ್ಚಿಸುತ್ತದೆ.
             3.ಹೈಡ್ರೋಕ್ವಿನೋನ್: ಈ ರಾಸಾಯನಿಕವು ಕಣ್ಣಿನ ಸಂಪರ್ಕಕ್ಕೆ ಬಂದಾಗ ಕಾರ್ನಿಯಾವನ್ನು ಹಾನಿಗೊಳಿಸಬಹುದು ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ. ಅಷ್ಟೇ ಅಲ್ಲ, ಇದರ ಗಾಳಿಯನ್ನು ಉಸಿರಾಡುವುದರಿಂದ ಮೂಗು, ಗಂಟಲು ಮತ್ತು ಶ್ವಾಸಕೋಶ ಮೇಲ್ಬಾಗದ ಪ್ರದೇಶದಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು.
            4. ಅಕ್ರಿಲೇಟ್ಸ್: ನೇಲ್ ಪಾಲಿಶ್ ತಯಾರಿಸಲು ಅಕ್ರಿಲೇಟ್ಸ್ ರಾಸಾಯನಿಕವನ್ನು ಸಹ ಬಳಸಲಾಗುತ್ತದೆ. ಇದರ ಅಡ್ಡ ಪರಿಣಾಮಗಳನ್ನು ಉಸಿರಾಟ ಮತ್ತು ಚರ್ಮದ ಸಂಪರ್ಕಕ್ಕೆ ಬರುವ ಮೂಲಕ ಕಾಣಬಹುದು. ಇದು ದೇಹ ಸೇರಿದರೆ, ಕರುಳು, ಹೊಟ್ಟೆ ಅಥವಾ ಗುದನಾಳದ ಕೊಲೊರೆಕ್ಟಲ್ ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
             5. ಬ್ಲಾಕ್ ಕಾರ್ಬನ್ : ಇದೊಂದು ಕಪ್ಪು ಪುಡಿಯಾಗಿದ್ದು, ಉಗುರು ಬಣ್ಣಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ದೇಹ ಪ್ರವೇಶಿಸುವುದರಿಂದ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಬಹುದು.
            ನೇಲ್ ಪಾಲಿಶ್‌ ಹಚ್ಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಯಾವಾಗಲೂ ಗಾಳಿಯಾಡುವ ಕೋಣೆಯಲ್ಲಿ ನೇಲ್ ಪಾಲಿಶ್ ಹಚ್ಚಿ. ಈ ಕಾರಣದಿಂದಾಗಿ, ನೇಲ್ ಪಾಲಿಶ್‌ನ ಸುವಾಸನೆಯು ಗಾಳಿಯಲ್ಲಿ ದೀರ್ಘಕಾಲ ಉಳಿಯುವುದಿಲ್ಲ. ಏಕೆಂದರೆ, ಉಗುರು ಬಣ್ಣವು ಸ್ಟಾಂಗ್ ಸುವಾಸನೆಯನ್ನು ಹೊಂದಿದ್ದು, ಮಕ್ಕಳಿಗೆ ಹಾನಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ನೇಲ್ ಪಾಲಿಶ್ ಲಭ್ಯವಿದ್ದರೂ, ಇದನ್ನು ಮಕ್ಕಳಿಗೆ ಮತ್ತೆ ಮತ್ತೆ ಹಚ್ಚುವುದನ್ನು ತಪ್ಪಿಸಿ. ಇದು ಇತರ ಉಗುರು ಹಾನಿಗಳಿಗೆ ಕಾರಣವಾಗಬಹುದು. ಮಕ್ಕಳಿಗೆ ಪಾರದರ್ಶಕ ಅಥವಾ ತಿಳಿ ಬಣ್ಣದ ನೇಲ್ ಪಾಲಿಶ್ ಹಚ್ಚಿ. ಡಾರ್ಕ್ ಬಣ್ಣದ ನೇಲ್ ಪಾಳಿಶ್ ಹಚ್ಚುವುದರಿಂದ, ಮಕ್ಕಳ ಗಮನವು ಉಗುರುಗಳ ಮೇಲೆ ಪದೇ ಪದೇ ಹೋಗುತ್ತದೆ ಮತ್ತು ಅವರು ತಮ್ಮ ಕೈಗಳನ್ನು ಬಾಯಿಗೆ ಹಾಕಲು ಪ್ರಾರಂಭಿಸುತ್ತಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries