ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅಣಬೆ ಬಾಯಿಯ ರುಚಿಯನ್ನು ಹೆಚ್ಚಿಸುವುದಲ್ಲಿಯೂ ಹಿಂದಿಲ್ಲ. ಸಂಜೆಯ ಹೊತ್ತು ಬಿಸಿ ಬಿಸಿ ಕಾಫಿ/ಟೀ ಜತೆ ಸವಿಯಬಹುದಾದ ರೆಸ್ಟೋರೆಂಟ್ ಶೈಲಿಯ ಮಶ್ರೂಮ್ ಕ್ಯಾಪ್ಸಿಕಮ್ ಫ್ರೈ ಮಾಡುವ ವಿಧಾನವನ್ನು ನಾವಿಂದು ತಿಳಿಸಿಕೊಡಲಿದ್ದೇವೆ.
ಉತ್ಕರ್ಷಣ ನಿರೋಧಕ ಸಮೃದ್ಧ ಅಣಬೆಗಳು ಕಡಿಮೆ ಕೊಬ್ಬನ್ನು ಹೊಂದಿದೆ, ಅಂಟು ರಹಿತ, ಪೋಷಕಾಂಶ ಭರಿತ ಆಹಾರವಾಗಿದೆ. ಅಣಬೆಗಳು ಬಹಳ ಬೇಗನೆ ಬೇಯುತ್ತವೆ, ರುಚಿಯನ್ನು ಅತ್ಯದ್ಭುತವಾಗಿ ಹೀರಿಕೊಳ್ಳುತ್ತವೆ.
ಬೇಕಾಗುವ ಪದಾರ್ಥಗಳು:
ಅಣಬೆಗಳು - 250 ಗ್ರಾಂ ಅರ್ಧ ಹೋಳು ಮಾಡಿ ಕತ್ತರಿಸಿ
ಕ್ಯಾಪ್ಸಿಕಂ 1 ದೊಡ್ಡದು ಉದ್ದ ತುಂಡುಗಳಾಗಿ ಕತ್ತರಿಸಿ
ಈರುಳ್ಳಿ 1 ದೊಡ್ಡದು ಉದ್ದ ತುಂಡುಗಳಾಗಿ ಕತ್ತರಿಸಿ
ಹಸಿರು ಮೆಣಸಿನಕಾಯಿ 2
ಬೆಳ್ಳುಳ್ಳಿ 1ಚಮಚ ನುಣ್ಣಗೆ ಹೆಚ್ಚಿದ
ಕರಿಬೇವಿನ ಎಲೆ 1 ಕಡ್ಡಿ
ಶುಂಠಿ ಅರ್ಧ ಚಮಚ ನುಣ್ಣಗೆ ಕೊಚ್ಚಿದ
ನಿಂಬೆ ರಸ 1 ಚಮಚ
ಕರಿಮೆಣಸು ಅರ್ಧ ಚಮಚ
ಎಣ್ಣೆ 2 ಚಮಚ
ಸೋಯಾ ಸಾಸ್ ಅರ್ಧ ಚಮಚ
ಟಮೋಟೊ ಸಾಸ್ ಅರ್ಧ ಚಮಚ
ಉಪ್ಪು ರುಚಿಗೆ
ಕೊತ್ತಂಬರಿ ಸೊಪ್ಪು ಅಲಂಕರಿಸಲು
ಮಶ್ರೂಮ್ ಕ್ಯಾಪ್ಸಿಕಮ್ ಫ್ರೈ ತಯಾರಿಸುವ ವಿಧಾನ|:
* ಅಣಬೆಗಳನ್ನು ಸ್ವಚ್ಛಗೊಳಿಸಿ ಮತ್ತು ಕಾಂಡಗಳನ್ನು ಟ್ರಿಮ್ ಮಾಡಿ ಉಪ್ಪುಸಹಿತ ಕುದಿಯುವ ನೀರಿನಲ್ಲಿ ಇಡಿ. ನಂತರ ಬಟ್ಟೆಯಲ್ಲಿ ಒರೆಸಿ ಅವುಗಳನ್ನು ಅರ್ಧ ಹೋಳು ತುಂಡು ಮಾಡಿ ಪಕ್ಕಕ್ಕೆ ಇರಿಸಿ.
* ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಬೆಳ್ಳುಳ್ಳಿ ಅರ್ಧ ನಿಮಿಷದ ನಂತರ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ 3 ನಿಮಿಷ ಬೇಯಿಸಿ.
* ನಂತರ ಕ್ಯಾಪ್ಸಿಕಂ ಸೇರಿಸಿ 4-5 ನಿಮಿಷ ಬಾಡಿಸಿ, ಅಣಬೆಗಳನ್ನು ಸೇರಿಸಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ. ನೀರಿನಂಶ ಇದ್ದರೆ, ದ್ರವವನ್ನು ಹೀರಿಕೊಳ್ಳುವವರೆಗೆ ಬೇಯಿಸಿ.
* ನೀರಿನಂಶ ಕಡಿಮೆ ಆದ ನಂತರ ಕರಿಮೆಣಸು ಪುಡಿ, ಸೋಯಾ ಸಾಸ್,ಟಮೋಟೊ ಸಾಸ್ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ 5 ನಿಮಿಷ ಬಾಡಿಸಿ.
* ಈಗ ಗ್ಯಾಸ್ ಆಫ್ ಮಾಡಿ ನಂತರ ನಿಂಬೆ ರಸವನ್ನು ಸೇರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಈಗ ಬಿಸಿ ಬಿಸಿ ಮಶ್ರೂಮ್ ಕ್ಯಾಪ್ಸಿಕಮ್ ಫ್ರೈ ಸವಿಯಲು ಸಿದ್ಧ.
INSTRUCTIONS
- ಸಂಜೆಯ ಹೊತ್ತು ಕಾಫಿ/ಟೀ ಜತೆ ಸವಿಯಲು ರುಚಿಕರವಾಗಿರುತ್ತದೆ ಹಾಗೂ ಮಕ್ಕಳಿಗೆ ಪೋಷಕಾಂಶದ ಜತೆ ರುಚಿಯನ್ನು ನೀಡುವ ಆರೋಗ್ಯಕರ ಸ್ನ್ಯಾಕ್ಸ್.
- NUTRITIONAL INFORMATION
- ಮಶ್ರೂಮ್ - 1 ಕಪ್
- ಕ್ಯಾಲ್ಸಿಯಂ - 2.9 ಗ್ರಾಂ
- ಪ್ರೋಟೀನ್ - 3 ಗ್ರಾಂ
- ಕಾರ್ಬೋಹೈಡ್ರೇಟ್ - 3.1 ಗ್ರಾಂ