ಮಲಪ್ಪುರಂ: ಮಲಪ್ಪುರಂ ಮಂಜೇರಿಯ ಲ್ಯಾಬ್ ವೊಂದರಲ್ಲಿ ಗಂಟಲ ದ್ರವ ಬಳಸದೆ ಕೋವಿಡ್ ಋಣಾತ್ಮಕ ಫಲಿತಾಂಶಗಳನ್ನು ನೀಡುತ್ತಿರುವುದು ಪತ್ತೆಹಚ್ಚಲಾಗಿದೆ. ಡಿಎಂಒ ವರದಿಯ ಅನುಸಾರ ಬಳಿಕ ಈ ಲ್ಯಾಬ್ ನ್ನು ಮುಚ್ಚಲಾಗಿದೆ. ಮಂಜೇರಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿರುವ ಸಫಾ ಎಂಬ ಲ್ಯಾಬ್ ಈ ವಂಚನೆ ನಡೆಸಿರುವುದಾಗಿದೆ.
ಪ್ರಯೋಗಾಲಯಕ್ಕೆ ಆರೋಗ್ಯ ಇಲಾಖೆ ಸೂಚಿಸಿದ ಯಾವುದೇ ಸೌಲಭ್ಯಗಳಿಲ್ಲದೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು ಎಂದು ತನಿಖೆಯ ಮೂಲಕ ತಿಳಿದುಬಂದಿದೆ. ಕಳೆದ 2 ತಿಂಗಳಿನಿಂದ ಸಫಾ ಲ್ಯಾಬ್ ಮೂಲಕ ನಡೆಸಿದ ಆರ್‍ಟಿಪಿಸಿಆರ್ ಪರೀಕ್ಷೆಗಳ ವಿವರಗಳನ್ನು ಒಳಗೊಂಡಿರುವ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಶಪಡಿಸಿಕೊಂಡ ದಾಖಲೆಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೋಲೀಸ್ ಐಟಿ ತಜ್ಞರು ಪರಿಶೀಲಿಸುತ್ತಿದ್ದಾರೆ. ಕೊರೋನಾ ಪರಿಣಾಮವನ್ನು ತಿರುಚಲಾಗಿದೆಯೇ ಎಂದು ಕಂಡುಹಿಡಿಯಲು ಜಿಲ್ಲೆಯ ಪ್ರಯೋಗಾಲಯಗಳಲ್ಲಿ ವ್ಯಾಪಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.