ಕಾಸರಗೋಡಿನ ಶಿಕ್ಷಣ ಕ್ಷೇತ್ರದ ಕ್ರಾಂತಿ ರಾಜ್ಯದ ದಕ್ಷಿಣದ ಜಿಲ್ಲೆಗೆ
ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿ ಅ|ಂದಿಗೂ, ಇಂದಿಗೂ ಸ್ತುತ್ಯರ್ಹವಾದುದೆ. ಅನೇಕ ಸಾಧಕ
ಶಿಕ್ಷಕರು, ಶಿಕ್ಷಣ ತಜ್ಞರು, ದಾನಿಗಳ ನೆರವಿನೊಂದಿಗೆ ಕಾಸರಗೋಡಿನ ಗ್ರಾಮ ಗ್ರಾಮಗಳಲ್ಲಿ
ಈಗಲೂ ವ್ಯಾಪಕ ಪ್ರಮಾಣದಲ್ಲಿ ನಿರಂತರ ಪ್ರಯತ್ನಗಳು ಸಾಗುತ್ತಲೇ ಇದೆ.
ಪ್ರಸ್ತುತ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಜಿಲ್ಲೆಯಲ್ಲಿ ಒಲಿಸಿಕೊಂಡವರು
ನಾರಾಯಣ ದೇಲಂಪಾಡಿ ಅವರಿಗೆ ಎನ್ನುವುದು ಗಡಿನಾಡಿನ ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಪ್ರಸ್ತುತ ಕಾಸರಗೋಡಿನ ಸಮಗ್ರ ಶಿಕ್ಷಾ ಕೇರಳ ಯೋಜನೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿ
ಸೇವೆ ಸಲ್ಲಿಸುತ್ತಿರುವ ಇವರ ಸಾಧನಾ ಪಥಗಳು ರೋಚಕ. ಶಿಕ್ಷಣ ಕ್ಷೇತ್ರದ ಸಮಗ್ರ
ಉನ್ನತಿಗೆ ನೀಡುತ್ತಿರುವ ಗಮನಾರ್ಹ ಸೇವೆಗಳು ನಿಜವಾಗಿಯೂ ಅಚ್ಚರಿ. ಶಿಕ್ಷಣ, ಕಲೆ, ಸಮಾಜ
ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಾರಾಯಣ ದೇಲಂಪಾಡಿಯವರ ಸಾಧನೆ,
ಸಾಗಿಬಂದ ಮಾರ್ಗಗಳ ಸಮಗ್ರ ಒಳನೋಟಗಳೊಂದಿಗೆ ಸಮರಸ ಸುದ್ದಿ ನಡೆಸಿದ ಸಂವಾದದ ಆಯ್ದ ಭಾಗ
ವೀಕ್ಷಕರಿಗೆ ಇಲ್ಲಿ ಬಿತ್ತರಿಸುತ್ತಿದ್ದೇವೆ. ವೀಕ್ಷಿಸಿ, ಪ್ರೋತ್ಸಾಹ ಸದಾ ನಮಗಿರಲಿ.
ಸಮರಸ ಸಂವಾದ: ಗ್ರಾಮೀಣತೆಯಿಂದ ಹುಟ್ಟಿದ ವಿದ್ಯಾಧಾರೆಗೆ ಒಲಿದ ರಾಜ್ಯ ಪುರಸ್ಕಾರ: ಅತಿಥಿ: ನಾರಾಯಣ ದೇಲಂಪಾಡಿ
0
ಸೆಪ್ಟೆಂಬರ್ 22, 2021
Tags