ತಿರುವನಂತಪುರಂ: ಕೇರಳ ಆಡಳಿತಾತ್ಮಕ ನ್ಯಾಯಮಂಡಳಿ ಅಧ್ಯಕ್ಷರಾಗಿ ಕೆ. ಅಬ್ದುಲ್ ರಹೀಮ್ ಅಧಿಕಾರ ವಹಿಸಿಕೊಂಡರು. ಹಂಗಾಮಿ ಅಧ್ಯಕ್ಷ ಬೆನ್ನಿ ಗಿರ್ವಾಸಿಸ್ ಮತ್ತು ಸದಸ್ಯರು ವಿ.ಎಸ್. ರಾಜೇಂದ್ರನ್ ಮತ್ತು ರಾಜೇಶ್ ದಿವಾನ್ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಸ್ವಾಗತಿಸಲಾಯಿತು.
ಅಡ್ವೋಕೇಟ್ ಜನರಲ್ ಕೆ. ಗೋಪಾಲಕೃಷ್ಣ ಕುರುಪ್, ತಿರುವನಂತಪುರಂ ವಕೀಲರ ಸಂಘದ ಅಧ್ಯಕ್ಷ ಡಿ. ಬಾಲು, ಕೇರಳ ಆಡಳಿತ ನ್ಯಾಯಮಂಡಳಿ ವಕೀಲರ ಸಂಘ ತಿರುವನಂತಪುರಂ ಅಧ್ಯಕ್ಷ ಫತ್ತಹುದ್ದೀನ್, ಅಸೋಸಿಯೇಶನ್ ಎರ್ನಾಕುಳಂ ಅಧ್ಯಕ್ಷ ಆರ್. ಕೆ. ಮುರಳೀಧರನ್ ಉಪಸ್ಥಿತರಿದ್ದರು. ಕೋವಿಡ್ ಪೆÇ್ರೀಟೋಕಾಲ್ ಅನುಸರಿಸಿ ವಂಚಿಯೂರ್, ತಿರುವನಂತಪುರಂನ ಕೋರ್ಟ್ ನಂ. 1 ರಲ್ಲಿ ಸಮಾರಂಭವನ್ನು ನಡೆಸಲಾಯಿತು.