ಬದಿಯಡ್ಕ: ಕ್ಯಾಂಪ್ಕೋದ ನೀರ್ಚಾಲು ಶಾಖೆಯಲ್ಲಿ ಮಂಗಳವಾರ ಕಾಳುಮೆಣಸು ಖರೀದಿಗೆ ಅಧಿಕೃತ ಚಾಲನೆ ನೀಡಲಾಯಿತು.
ಕ್ಯಾಂಪೆÇ್ಕೀ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಕಾಳುಮೆಣಸು ಖರೀದಿಗೆ ಚಾಲನೆ ನೀಡಿ ಮಾತನಾಡಿ, ಸಾಂಪ್ರದಾಯಿಕ ಕೃಷಿಕರ ಪ್ರಧಾನ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಕಲ್ಪಿಸುವ ಮೂಲಕ ಕ್ಯಾಂಪ್ಕೋ ಕೃಷಿಕರಿಗೆ ಬೆಂಬಲವಾಗಿ ನಿಂತಿದೆ. ಅತ್ಯಲ್ಪ ಅವಧಿಯಲ್ಲೇ ರಾಷ್ಟ್ರಾದ್ಯಂತ ದೊಡ್ಡ ಸಂಸ್ಥೆಯಾಗಿ ಬೆಳೆದಿರುವ ಕ್ಯಾಂಪ್ಕೋ ಕೃಷಿಕರಿಂದ ಕೃಷಿಕರಿಗಾಗಿ ರೂಪುಗೊಂಡ ಹೆಮ್ಮೆಯ ಸಂಸ್ಥೆ ಎಂದು ತಿಳಿಸಿದರು.
ಹಿರಿಯ ಕೃಷಿಕ ದಯಾನಂದ ಭಟ್ ಅವರು ಪ್ರಥಮ ಖರೀದಿ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ನಿರ್ದೇಶಕ ಪದ್ಮರಾಜ್ ಪಟ್ಟಾಜೆ, ಕ್ಯಾಂಪೆÇ್ಕೀ ಬದಿಯಡ್ಕ ವಲಯ ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.