ನವದೆಹಲಿ :ಜೂನ್ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಳೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.
ಪರಿಮಾಣಾತ್ಮಕವಾಗಿ ಮಾನ್ಸುನ್ ಋತುವಿನಲ್ಲಿ ದೇಶಾದ್ಯಂತ ಜೂನ್ 1ರಿಂದ ಸೆಪ್ಟೆಂಬರ್ 30 ರವರೆಗೆ 87 ಸೆಂಟೀ ಮೀಟರ್ ಮಳೆಯಾಗಿದೆ. ನೈರುತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಎಂ.ಮೊಹಪಾತ್ರ ತಿಳಿಸಿದ್ದಾರೆ.
ಇದು ಸತತ ಮೂರನೇ ವರ್ಷ ದೇಶ ಸಾಮಾನ್ಯ ಮತ್ತು ಅದಕ್ಕೂ ಸ್ವಲ್ಪ ಹೆಚ್ಚಿನ ಮಳೆ ದಾಖಲಿಸಿದೆ. ಇದು 2019 ಮತ್ತು 2020 ರಲ್ಲಿ ದಾಖಲಾಗಿದ್ದ ಸಾಮಾನ್ಯ ಮಳೆಗಿಂತ ಹೆಚ್ಚಾಗಿದೆ. ವಾಯುವ್ಯ ಭಾರತದ ಕೆಲವು ಭಾಗಗಳಿಂದ ಅಕ್ಟೋಬರ್ 6 ರಿಂದ ನೈರುತ್ಯ ಮುಂಗಾರು ಮಾರುತದ ಹಿಂತೆಗೆತ ಆರಂಭವಾಗುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.