ಮಧೂರು: ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಮೀನುಕೃಷಿಯ ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದ ಕೊಯ್ಲಿನ ಉದ್ಘಾಟನೆ ಮಧೂರು ಗ್ರಾಮ ಪಂಚಾಯತಿಯಲ್ಲಿ ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಕೃಷ್ಣ ಉದ್ಘಾಟಿಸಿದರು. ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಜಮೀಲಾ, ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ , ಸುಭಿಕ್ಷ ಕೇರಳಂ ಪ್ರಮೋಟರ್ ಮಿಸ್ರಿಯಾ ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು. ಮೀನುಗಾರಿಕೆ ವಿಸ್ತರಣೆ ಅಧಿಕಾರಿ ಎ.ಜಿ.ಅನಿಲ್ ಕುಮಾರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ವಿಸ್ತರಣೆ ಅಧಿಕಾರಿ ಹನೀಫ ಸ್ವಾಗತಿಸಿ, ಯೋಜನೆ ಸಂಚಾಲಕಿ ತಸ್ನಿಂ ವಂದಿಸಿದರು.
ಮನೆ ಹಿತ್ತಿಲಲ್ಲಿ ಮೀನು ಕೃಷಿ ಯೋಜನೆ ಪ್ರಕಾರ ವಿವಿಧ ಹಂತಗಳಲ್ಲಿ 418 ಕಿಲೋ ಮೀನು ಕೊಯ್ಲು ನಡೆಸಲಾಗಿದೆ.