ಕಾಸರಗೋಡು: ಮಹಿಳಾ ಸಂರಕ್ಷಣೆ ಖಚಿತಪಡಿಸುವ ನಿಟ್ಟಿನಲ್ಲಿ ಕೇರಳ ಪೆÇಲೀಸ್ ವಿಭಾಗದ ಪಿಂಕ್ ಪೆÇಲೀಸ್ ಪೆÇ್ರಟೆಕ್ಷನ್ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಸೈಬರ್ ಪ್ರಪಂಚದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ, ಅಪಮಾನ ಸಹಿತ ವಿವಿಧ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಿಂಕ್ ಪೆÇಲೀಸ್ ಪೆÇ್ರಟೆಕ್ಷನ್ ಯೋಜನೆ ಚಟುವಟಿಕೆ ನಡೆಸಲಿದೆ.
ಜಿಲ್ಲೆಯಿಂದ ಆಯ್ದ 6 ಮಂದಿ ಮಹಿಳಾ ಪೆÇಲೀಸ್ ಸಿಬ್ಬಂದಿ ಈ ಸಂಬಂಧ ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರಿ, ಖಾಸಗಿ ಬಸ್‍ಗಳು, ಬಸ್ ತಂಗುದಾಣ, ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧೆಡೆ ಪಿಂಕ್ ಪೊಲೀಸ್ ಬೀಟ್‍ನ ಸೇವೆಯಿರಲಿದೆ. ಜನಸಂದಣಿಯಿರುವ ಪ್ರದೇಶಗಳಲ್ಲಿ ಸಮಾಜಬಾಹಿರ
ಕೃತ್ಯವೆಸಗುವವರನ್ನು ನಿಯಂತ್ರಿಸಲು ಪಿಂಕ್ ಶ್ಯಾಡೋ ತಂಡ ಚಟುವಟಿಕೆ ನಡೆಸಲಿದೆ. ಸ್ವಯಂ ಸೇವಾ ಸಂಘಟನೆಗಳ ಸಹಕಾರದೊಂದಿಗೆ ಮಹಿಳಾ ಘಟಕಗಳು ನಡೆಸುತ್ತಿರುವ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿತಗೊಳಿಸುವುದು ಯೋಜನೆ ಉದ್ದಶವಾಗಿದೆ. ಜಿಲ್ಲೆಗೆ ಮಂಜೂರು ಮಾಡಲಾದ ಪಿಂಕ್ ಬೈಕ್ ಗಸ್ತಿಗೆ ರಾಜ್ಯ ಪೆÇಲೀಸ್ ವರಿಷ್ಠ ವೈ.ಅನಿಲ್ ಕಾಂತ್ ಗುರುವಾರ ಹಸಿರು ನಿಶಾನಿ ತೋರಿಸಿದ್ದರು. ಡಿವೈಎಸ್‍ಪಿ ಎ.ಸತೀಶ್ ಕುಮಾರ್ ಪಿಂಕ್ ಜನಮೈತ್ರಿ ಬೀಟ್ ಯೋಜನೆ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.