HEALTH TIPS

ಮುಖಪುಟದಲ್ಲಿ ಮೋದಿ ಫೋಟೊ: ಸ್ಪಷ್ಟನೆ ನೀಡಿದ 'ದಿ ನ್ಯೂಯಾರ್ಕ್‌ ಟೈಮ್ಸ್‌'

Top Post Ad

Click to join Samarasasudhi Official Whatsapp Group

Qries

                    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡ ಬಗ್ಗೆ ಅಲ್ಲಿನ ಪ್ರಮುಖ ಪತ್ರಿಕೆ ದಿ ನ್ಯೂಯಾರ್ಕ್‌ ಟೈಮ್ಸ್ ಸೆ.26ರ ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು ಎನ್ನಲಾದ ವದಂತಿಗೆ ಸ್ವತಃ 'ದಿ ನ್ಯೂಯಾರ್ಕ್‌ ಟೈಮ್ಸ್‌' ಸ್ಪಷ್ಟನೆ ನೀಡಿದೆ.

                    'ಭೂಮಿಯ ಕಟ್ಟ ಕಡೆಯ ಉತ್ತಮ ಭರವಸೆ' ಎಂಬ ತಲೆಬರಹದಡಿ ನ್ಯೂಯಾರ್ಕ್‌ ಟೈಮ್ಸ್‌ ಮುಖಪುಟದಲ್ಲೇ ದೊಡ್ಡ ಫೋಟೊ ಸಹಿತ ವರದಿ ಪ್ರಕಟಿಸಿದೆ ಎಂಬ ವದಂತಿ ಹರಡಿತ್ತು.

'ವಿಶ್ವದಲ್ಲೇ ಅತಿಹೆಚ್ಚು ಪ್ರೀತಿಸಲ್ಪಡುವ ಮತ್ತು ಅತ್ಯಂತ ಶಕ್ತಿಶಾಲಿ ನಾಯಕ, ನಮ್ಮನ್ನು ಹರಸಲು ಇಲ್ಲಿದ್ದಾರೆ' ಎಂಬ ಕಿಕ್ಕರ್‌ಅನ್ನು ಒಳಗೊಂಡಿದ್ದ ದಿ ನ್ಯೂಯಾರ್ಕ್‌ ಟೈಮ್ಸ್‌ನ ಮುಖಪುಟ ಎನ್ನಲಾದ ಪೋಸ್ಟ್‌ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು.


                      'ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಇರುವ ಪತ್ರಿಕೆಯ ಮುಖಪುಟದ ಚಿತ್ರವು ತಿರುಚಿದ್ದಾಗಿದೆ. ದಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವರದಿಗಳನ್ನು ಇಲ್ಲಿ ಪರಿಶೀಲಿಸಬಹುದು' ಎಂದು ವೆಬ್‌ಸೈಟ್‌ನ ಲಿಂಕ್‌ಅನ್ನು 'ದಿ ನ್ಯೂಯಾರ್ಕ್‌ ಟೈಮ್ಸ್‌ ಕಮ್ಯುನಿಕೇಷನ್ಸ್‌' ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

                ಮೋದಿ ಅಮೆರಿಕ ಭೇಟಿ ಸಂದರ್ಭ ಯಾವುದೇ ವರದಿ ಆ ಪತ್ರಿಕೆಯಲ್ಲಿ ಪ್ರಕಟಗೊಂಡಿಲ್ಲ ಎಂಬುದು ಎನ್‌ವೈ ಟೈಮ್ಸ್‌ ಹಂಚಿಕೊಂಡಿರುವ ಲಿಂಕ್‌ನಿಂದ ಸ್ಪಷ್ಟವಾಗಿದೆ.

                'ಕೆಲವರು ಅಂತರರಾಷ್ಟ್ರೀಯ ಮಾಧ್ಯಮವನ್ನು ಟೀಕಿಸುತ್ತಾರೆ ಮತ್ತು ಅದರ ಸಹಾಯವನ್ನೇ ಪಡೆದುಕೊಂಡು ಸುಳ್ಳು ಪ್ರಚಾರವನ್ನೂ ಮಾಡುತ್ತಾರೆ. ಇಂತಹ ಸುಳ್ಳು ಪ್ರಚಾರ ಮಾಡುವ 'ವಿಶೇಷ ಪಕ್ಷದ' ಜನರಿಗೆ ನಾಚಿಕೆಯಾಗಬೇಕು.' ಎಂದು ಕಾಂಗ್ರೆಸ್‌ ಟೀಕಿಸಿದೆ.

                'ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಪ್ರಧಾನಿ ಮೋದಿ ಅವರಿಗೆ ಮುಖಪುಟವನ್ನು ಮೀಸಲಿಟ್ಟಿದೆ' ಎಂದು ಕೆಲವು ಬಿಜೆಪಿ ಮುಖಂಡರು ಸೇರಿದಂತೆ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

                  ಸೆಪ್ಟೆಂಬರ್‌ ಸ್ಪೆಲ್ಲಿಂಗ್‌ ತಪ್ಪಿರುವ ಬಗ್ಗೆ, ನ್ಯೂಯಾರ್ಕ್‌ ಟೈಮ್ಸ್‌ನ ಅಕ್ಷರ ವಿನ್ಯಾಸಗಳ ಬಗ್ಗೆ ಕೆಲವರು ಬೊಟ್ಟು ಮಾಡಿದ್ದರು. ಇದೊಂದು ತಿರುಚಿದ ಚಿತ್ರ ಎಂದೂ ವಾದಿಸಿದ್ದರು. ಮೋದಿ ಬೆಂಬಲಿಗರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಜುಗರ ಎದುರಿಸಬೇಕಾಗಿದೆ ಎಂದು ಕೆಲವರು ಅಸಮಾಧಾನ ತೋಡಿಕೊಂಡಿದ್ದರು. ಇದೀಗ ನ್ಯೂಯಾರ್ಕ್‌ ಟೈಮ್ಸ್‌ ಸ್ಪಷ್ಟನೆ ನೀಡಿದ್ದು, ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.

                   ಇತ್ತೀಚೆಗೆ ಎಂದರೆ ಸೆ.24ರಂದು, ಭಾರತಕ್ಕೆ ಸಂಬಂಧಿಸಿ ಭಾರತೀಯ ಸೇನೆ, ನೆರೆಯ ಚೀನಾ ಮತ್ತು ಪಾಕಿಸ್ತಾನದ ಜೊತೆಗಿನ ತಿಕ್ಕಾಟ ಹಾಗೂ ಅಫ್ಗಾನಿಸ್ತಾನದಲ್ಲಾದ ಬೆಳವಣಿಗೆ ಕುರಿತಾದ ವಿಶ್ಲೇಷಣಾತ್ಮಕ ವರದಿಯೊಂದು ಪ್ರಕಟಗೊಂಡಿದೆ. ನಿರ್ದಿಷ್ಟವಾಗಿ ಪ್ರಧಾನಿ ಮೋದಿ ಅವರ ಕುರಿತಾದ ವರದಿ ಎಂದರೆ, ಮೋದಿ ಜನ್ಮದಿನದಂದು 2.5 ಲಕ್ಷ ಕೋವಿಡ್‌ ಲಸಿಕೆ ನೀಡಿದ ವರದಿ ಸೆ.17ಕ್ಕೆ ಪ್ರಕಟಗೊಂಡಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries