ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಟಾಟಾ ಟ್ರಸ್ಟ್ ಸರಕಾರಿ ಆಸ್ಪತ್ರೆಯಲ್ಲಿ ಸೀವೇಜ್ ಟ್ರೀಟ್ ಮೆಂಟ್ ಘಟಕ ನಿರ್ಮಾಣ ನಡೆಸಲು ಆಡಳಿತೆ ಮಂಜೂರಾತಿ ಲಭಿಸಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಸಭೆ ಈ ಮಂಜೂರಾತಿ ನೀಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಈ ನಿಟ್ಟಿನಲ್ಲಿ 1.17 ಕೋಟಿ ರೂ. ಮೀಸಲಿರಿಸಲಾಗಿದೆ. ಆಸ್ಪತ್ರೆಯ ಮಲಿನಜಲ ಶುದ್ಧಿಕರಣಗೊಳಿಸುವ ವ್ಯವಸ್ಥಿತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಘಟಕ ನಿರ್ಮಿಸಲಾಗುತ್ತಿದೆ. ಒಂದು ಲಕ್ಷ ಲೀಟರ್ ಸಾಮಥ್ರ್ಯದ ಸೀವೇಜ್ ಟ್ರೀಟ್ ಮೆಂಟ್ ಘಟಕದಲ್ಲಿ ಕಲೆಕ್ಷನ್ ಸಿಸ್ಟಂ, ಆಪರೇಟರ್ ರೂಂ, ಬಯೋಗ್ಯಾಸ್ ಪ್ಲಾಂಟ್ ಸಹಿತ ಎಲ್ಲ ಅತ್ಯಾಧುನಿಕ ಸಔಲಭ್ಯಗಳು ಇರುವುವು. ಎಲ್.ಎಸ್.ಜಿ.ಡಿ.ಕಾರ್ಯಕಾರಿ ಇಂಜಿನಿಯರ್ ನಿರ್ವಹಣೆ ಹೊಣೆಯ ಸಿಬ್ಬಂದಿಯಾಗಿದ್ದಾರೆ.
ಯೋಜನೆಯ ಟೆಂಡರ್ ಕ್ರಮಗಳನ್ನು ತ್ವರಿತದಿಂದ ಪೂರ್ತಿಗೊಳಿಸುವುದಾಗಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.