HEALTH TIPS

ಟೆಲಿಕಾಂ ಕ್ಷೇತ್ರಕ್ಕೆ ಆಕ್ಸಿಜನ್​: ಬಾಕಿ ಪಾವತಿಸಲು ನಾಲ್ಕು ವರ್ಷ ಮಾರಟೋರಿಯಂ

                 ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೂರಸಂಪರ್ಕ ಕಂಪನಿಗಳು ಬಾಕಿ ಪಾವತಿಯನ್ನು ನಾಲ್ಕು ವರ್ಷದವರೆಗೆ ವಿಳಂಬವಾಗಿ ಜಮೆ ಮಾಡುವ ಅನುಕೂಲ ಮತ್ತು ಈ ಕ್ಷೇತ್ರದಲ್ಲಿ ಶೇ. 100 ವಿದೇಶಿ ನೇರ ಹೂಡಿಕೆಗೆ ಅವಕಾಶಕ್ಕೆ ಸಮ್ಮತಿಸಲಾಗಿದೆ. ಅಟೋಮೊಬೈಲ್​ ಮತ್ತು ಡ್ರೋನ್​ ತಯಾರಿಕೆ ಕ್ಷೇತ್ರದಲ್ಲಿ ಪಿಎಲ್​ಐ, ಆರೋಗ್ಯ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಂತಹ ಯೋಜನೆಗಳಿಗೆ ಹಣಕಾಸು ಮಂಜೂರಾತಿಯ ಅನುಮೋದನೆಯೂ ದೊರೆತಿದೆ.

              ಬೆಂಗಳೂರು: ಆರ್ಥಿಕ ಸಂಕಷ್ಟದ ಸಂಕೋಲೆಯಲ್ಲಿ ಸಿಲುಕಿ ಐಸಿಯು ಸೇರಿದ್ದ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸಕಾರ ಮಾರಟೋರಿಯಂನ ಆಕ್ಸಿಜನ್​ ನೀಡಿದೆ. ದೂರಸಂಪರ್ಕ ಕಂಪನಿಗಳು ಬಹುಕಾಲದಿಂದ ಬಾಕಿ ಉಳಿಸಿಕೊಂಡಿರುವ ತರಂಗಾಂತರ ಹಂಚಿಕೆ ಮತ್ತು ಪರವಾನಗಿಯ ಕೋಟ್ಯಂತರ ರೂಪಾಯಿ ಶುಲ್ಕದ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ ನೀಡಿದೆ. ಇದರಲ್ಲಿ ಮುಂದಿನ ವರ್ಷ ಏಪ್ರಿಲ್​ಗೆ ಕಟ್ಟಬೇಕಿರುವ ಕಂತೂ ಸೇರಿದೆ. ಜತೆಗೆ ಈ ವಲಯದಲ್ಲಿ ನೂರಕ್ಕೆ ನೂರರಷ್ಟು ವಿದೇಶಿ ನೇರ ಹೂಡಿಕೆಗೂ (ಎ​ಡಿಐ) ಕೇಂದ್ರ ಸಂಪುಟ ಅನುಮೋದನೆ ನೀಡಿರುವುದು ಮತ್ತೊಂದು ಮಹತ್ವದ ಬೆಳವಣಿಗೆ.

                ಬಾಕಿ ಮೇಲಿನ ಬಡ್ಡಿಯ ನಾಲ್ಕು ವರ್ಷದ ಮಾರಟೋರಿಯಂ (ಕಂತು ಪಾವತಿ ಮುಂದೂಡಿಕೆ) ಮೊತ್ತವನ್ನು ಸರ್ಕಾರಿ ಇಕ್ವಿಟಿಯಾಗಿ ಪರಿವತಿರ್ಸುವ ಅವಕಾಶನ್ನೂ ನೀಡಲಾಗಿದೆ. ಸರಿಹೊಂದಿಸಿದ ಒಟ್ಟು ಆದಾಯವನ್ನು (ಎಜಿಆರ್​) ಟೆಲಿಕಾಂ ಕಂಪನಿಗಳು ಮರುಹೊಂದಾಣಿಕೆ ಮಾಡಿ ತರಂಗಾಂತರ ಬಳಕೆಯ ಶುಲ್ಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಶೇ.100 ಎಫ್‌ಡಿಐ
             ದೂರಸಂಪರ್ಕ ವಲಯದಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.49 ಎ​ಡಿಐಗೆ ಇದ್ದ ಅನುಮತಿಯನ್ನು ಈಗ ಶೇ. 100ಕ್ಕೆ ಏರಿಸಲಾಗಿದೆ. ಇದರಿಂದ ದೊಡ್ಡ ಮಟ್ಟದ ಬಂಡವಾಳ ಹರಿದು ಬರುವ ನಿರೀೆ ಇದೆ. ಆದರೆ, ಪಾಕಿಸ್ತಾನ ಮತ್ತು ಚೀನಾ ಮೂಲದ ಹೂಡಿಕೆದಾರರು ಅಥವಾ ಕಂಪನಿಗಳಿಗೆ ನಿರ್ಬಂಧ ಇದೆ

                              ಆಟೋಮೊಬೈಲ್​ಗೆ ಬಲ: 26 ಸಾವಿರ ಕೋಟಿ ರೂ. ಸ್ಕೀಂ
           ಎಲೆಕ್ಟ್ರಿಕಲ್​ ಮತ್ತು ಜಲಜನಕ (ಹೈಡ್ರೋಜನ್​) ಆಧಾರಿತ ವಾಹನಗಳ ತಯಾರಿಕೆಯನ್ನು ಉತ್ತೇಜಿಸಲು ಆಟೋಮೊಬೈಲ್​ ವಲಯಕ್ಕೆ ಸುಮಾರು 26,000 ಕೋಟಿ ರೂಪಾಯಿ ಉತ್ಪಾದನಾ ಆಧಾರಿತ ಪ್ರೋತ್ಸಾಹ (ಪಿಎಲ್​ಐ) ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯು ವಾಹನಗಳ ಬಿಡಿಭಾಗ ತಯಾರಿಕಾ ವಲಯವನ್ನೂ ಒಳಗೊಂಡಿದೆ.

              ಈ ಯೋಜನೆಯಿಂದ 7.50 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ. ಆಟೋಮೊಬೈಲ್​ ಮತ್ತು ವಾಹನಗಳ ಬಿಡಿಭಾಗ ತಯಾರಿಕಾ ವಲಯಕ್ಕೆ ಐದು ವರ್ಷಗಳಿಗೆ ಅನ್ವಯವಾಗುವಂತೆ 57,043 ಕೋಟಿ ರೂಪಾಯಿ ಹೊಸ ಯೋಜನೆಯನ್ನು ಸರ್ಕಾರ ಕಳೆದ ವರ್ಷ ಘೋಷಿಸಿತ್ತು. ಈಗ ಇದನ್ನು ಸಂಪುಟ 25,938 ಕೋಟಿ ರೂಪಾಯಿಗೆ ತಗ್ಗಿಸಿ ಜಲಜನಕ ಮತ್ತು ಎಲೆಕ್ಟ್ರಿಕಲ್​ ವಾಹನಗಳ ತಯಾರಿಕೆಗಷ್ಟೆ ಸೀಮಿತಗೊಳಿಸಿ ಅನುಮೋದನೆ ನೀಡಿದೆ. ಇದು 2021-22ನೇ ಸಾಲಿನ ಬಜೆಟ್​ನಲ್ಲಿ 13 ವಲಯಗಳಿಗೆ ಘೋಷಿಸಲಾದ 1.97 ಲಕ್ಷ ಕೋಟಿ ರೂಪಾಯಿ ಪಿಎಲ್​ಐ ಯೋಜನೆಯ ಭಾಗವಾಗಿದೆ. ಪಿಎಲ್​ಐ ಯೋಜನೆಯನ್ನು ಭಾರತೀಯ ವಾಹನ ತಯಾರಕರ ಸೊಸೈಟಿ (ಎಸ್​ಐಎಎಂ) ಸ್ವಾಗತಿಸಿದ್ದು, ಇದರಿಂದ ಅಟೋಮೊಬೈಲ್​ ವಲಯ ಬಲಗೊಳ್ಳುತ್ತದೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಎಂದು ಹೇಳಿದೆ.

                              ಡ್ರೋನ್​ ತಯಾರಿಕೆಯಲ್ಲಿ 5 ಸಾವಿರ ಕೋಟಿ ರೂ. ಪಿಎಲ್​ಐ
           ಡ್ರೋನ್​ ತಯಾರಿಕಾ ವಲಯದಲ್ಲಿ ಮೂರು ವರ್ಷದವರೆಗೆ 5,000 ಕೋಟಿ ರೂಪಾಯಿ ಪಿಎಲ್​ಐ ಯೋಜನೆ ಘೋಷಿಸುವ ಮೂಲಕ 1,500 ಕೋಟಿ ರೂಪಾಯಿ ಮೌಲ್ಯದ ಮಾರಾಟ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಯೋಜನೆಗೂ ಸಂಪುಟ ಸಮ್ಮತಿಸಿದೆ. ಇದರಿಂದ ಈ ಕ್ಷೇತ್ರದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಯ ನಿರೀೆ ಇದೆ. ಈ ಯೋಜನೆಯಿಂದ ಡ್ರೋನ್​ ರ್ತು ಉದ್ಯಮ ಬೆಳವಣಿಗೆ ಕಾಣಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

                                ಸ್ವಸ್ಥ ಭಾರತ್​ ಯೋಜನೆಗೆ 64 ಸಾವಿರ ಕೋಟಿ ರೂ.

           ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್​ ಯೋಜನೆಗೆ (ಪಿಎಂಎಎಸ್​ಬಿವೈ) 64,000 ಕೋಟಿ ರೂಪಾಯಿ ಅನುದಾನ ಒದಗಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಎಲ್ಲ ಜಿಲ್ಲೆಗಳಲ್ಲಿ ಮತ್ತು 3,382 ಬ್ಲಾಕ್​ಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಲ್ಯಾಬ್​ಗಳನ್ನು ಸ್ಥಾಪಿಸುವ ಮತ್ತು ಆರೋಗ್ಯ ಕ್ಷೇತ್ರದ ಇನ್ನಿತರ ಮೂಲಸೌಕರ್ಯ ಹೆಚ್ಚಳದ ಉದ್ದೇಶದಿಂದ ಈ ಯೋಜನೆಯನ್ನು ಕಳೆದ ೆಬ್ರವರಿಯಲ್ಲಿ ಮಂಡನೆಯಾದ ಮುಂಗಡ ಪತ್ರದಲ್ಲಿ ಘೋಷಣೆ ಮಾಡಲಾಗಿತ್ತು. ಮುಂದಿನ ಆರು (2025-26ರೊಳಗೆ) ವರ್ಷಗಳಲ್ಲಿ ಈ ಲ್ಯಾಬ್​ ಸ್ಥಾಪಿತವಾಗಲಿವೆ. ಇದಕ್ಕೆ 64,180 ಕೋಟಿ ರೂ.ಅಂದಾಜು ಮಾಡಲಾಗಿದೆ. ಈ ಯೋಜನೆ ರಾಷ್ಟ್ರೀಯ ಆರೋಗ್ಯ ಮಿಷನ್​ ಯೋಜನೆ ಪೂರಕವಾಗಿರಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
                ದೂರಸಂಪರ್ಕ ಕಂಪನಿಗಳಿಗೆ ಘೋಷಿಸಲಾದ ಪ್ಯಾಕೇಜ್​ ಹಣಕಾಸು ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿರುವ ಟೆಲಿಕಾಂ ಕಂಪನಿಗಳಿಗೆ ತುಸು ನಿರಾಳ ನೀಡಲಿದೆ. ಶೇ. 100 ಎಫ್‌ಡಿಐಗೆ ಅವಕಾಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಪಿಎಲ್​ಐಯೋಜನೆಯಿಂದ ಅಟೋಮೊಬೈಲ್​ ಮತ್ತು ಡ್ರೋನ್​ ತಯಾರಿಕಾ ವಲಯದಲ್ಲಿ ಉದ್ಯೋಗ ಸೃಷ್ಟಿಯ ದೃಷ್ಟಿ ಇದೆ. ಆರೋಗ್ಯ ವಲಯದ ಮೂಲಸೌಕರ್ಯಕ್ಕೆ ಒತ್ತು ನೀಡುವ ಪಿಎಂಎಎಸ್​ಬಿವೈಗೆ ಹೆಚ್ಚಿನ ಅನುದಾನ ಕಲ್ಪಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್​ ಹೇಳಿದ್ದಾರೆ.

                            ಪಿಎಂಎಎಸ್​ಬಿವೈ ಮುಖ್ಯಾಂಶ
* ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವಿಷಯದಲ್ಲಿ ಹೆಚ್ಚಿನ ಗಮನ ನೀಡಲಾದ 10 ರಾಜ್ಯಗಳ 17,788 ಗ್ರಾಮೀಣ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ನೆರವು.
* ಎಲ್ಲ ರಾಜ್ಯಗಳ ನಗರ ಪ್ರದೇಶದಲ್ಲಿ 11,024 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆ.
* 602 ಜಿಲ್ಲೆ ಮತ್ತು 12 ಕೇಂದ್ರೀಯ ಸಂಸ್ಥೆಗಳಲ್ಲಿ ಕ್ರಿಟಿಕಲ್​ ಕೇರ್​ ಬ್ಲಾಕ್​ಗಳ ನಿರ್ಮಾಣ.
* ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ಇದರ ಐದು ಪ್ರಾದೇಶಕ ಕಚೇರಿ ಹಾಗೂ 20 ಮಹಾನಗರಗಳ ಆರೋಗ್ಯ ನಿಗಾವಣಾ ಟಕಗಳ ಬಲವರ್ಧನೆ.
* ಎಲ್ಲ ಸಾರ್ವತ್ರಿಕ ಲ್ಯಾಬ್​ಗಳಿಗೂ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಪಕಿರ್ಸುವ ಸಮಗ್ರ ಆರೋಗ್ಯ ಮಾಹಿತಿ ವಿನಿಮಯ ಪೋರ್ಟಲ್​ ವಿಸ್ತರಣೆ.
* 32 ವಿಮಾನ ನಿಲ್ದಾಣ, 11 ಬಂದರು, ದೇಶದ ಭೂಮಾರ್ಗ ಗಡಿಯ 7 ಪಾಯಿಂಟ್​ಗಳಲ್ಲಿ 17 ಹೊಸ ಆರೋಗ್ಯ ಟಕ ಸ್ಥಾಪನೆ ಮತ್ತು ಈಗಾಗಲೇ ಇರುವ 33 ಆರೋಗ್ಯ ಟಕಗಳ ಬಲವರ್ಧನೆ.
* 15 ತುರ್ತು ಆರೋಗ್ಯ ಕೇಂದ್ರ ಮತ್ತು 2 ಸಂಚಾರಿ ಆಸ್ಪತ್ರೆಗಳ ಸ್ಥಾಪನೆ. * ಡಬ್ಲೂಎಚ್​ಒದ ಆಗ್ನೇಯ ಏಷ್ಯಾ ಪ್ರಾದೇಶಿಕ ಸಂಶೋಧನಾ ವೇದಿಕೆ, 'ಒನ್​ ಹೆಲ್ತ್​' ರಾಷ್ಟ್ರೀಯ ಸಂಸ್ಥೆ, 9 ಜೈವಿಕ ಸುರಕ್ಷತೆಯ 3ನೇ ಹಂತದ ಲ್ಯಾಬ್​, ನಾಲ್ಕು ಪ್ರಾದೇಶಿಕ ಮಟ್ಟದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳ ಸ್ಥಾಪನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries