HEALTH TIPS

ಕೆಪಿಎಸ್ ಟಿ ಎ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರಕ್ಕೆ ಔಷಧಿ ಕಿಟ್ ಹಸ್ತಾಂತರ

  

                ಮುಳ್ಳೇರಿಯ:  ಕೇರಳ ಪ್ರದೇಶ್ ಸ್ಕೂಲ್ ಟೀಚರ್ ಅಸೋಸಿಯೇಷನ್(ಕೆಪಿಎಸ್ ಟಿ ಎ) ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಗುರು ಸ್ಪಶರ್ಂ=2 ಕಾರುಣ್ಯ ಚಟುವಟಿಕೆಯ ಭಾಗವಾಗಿ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮಿತಿ ಯ ವತಿಯಿಂದ ವಿತರಿಸಲಾಗುವ ಔಷಧಿ ಕಿಟ್ ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

             ಸಭಾಕಾರ್ಯಕ್ರಮವನ್ನು ಕೆಪಿಎಸ್ ಟಿ ಎ ಕುಂಬಳೆ ಉಪ ಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್  ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ  ಅನೂಪ್ ಅವರಿಗೆ  ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕೋಶಾಧಿಕಾರಿ ಅರವಿಂದಾಕ್ಷನ್ ಸಿಪಿಕೆ ಔಷಧಿ ಕಿಟ್ ಹಸ್ತಾಂತರಿಸಿದರು. ಕೆಪಿಎಸ್ ಟಿ ಎ  ರಾಜ್ಯ ಕೌನ್ಸಿಲರ್ ಯೂಸುಫ್ ಮಾಸ್ತರ್, ,ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಗೋಪಾಲ ಮಾಸ್ತರ್ ಶುಭ ಹಾರೈಸಿದರು. ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯದರ್ಶಿ  ರಾಧಾಕೃಷ್ಣನ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries