ಕೊಚ್ಚಿ: ಪುರಾತನ ವಸ್ತುಗಳ ಮಾರಾಟಗಾರನಿಗೆ ವಂಚಿಸಿದ ಆರೋಪದ ಮೇಲೆ ಚೇರ್ತಲ ಮೂಲದ ಮಾನ್ಸನ್ ಮಾವುಂಗಲ್ ಎಂಬವನನ್ನು ಬಂಧಿಸಲಾಗಿದೆ. ಆತ 10 ಕೋಟಿ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಟಿಪ್ಪು ಸುಲ್ತಾನನ ಸಿಂಹಾಸನವೆಂದು ವಂಚಿಸಿರುವುದಾಗಿ ಹೇಳಲಾಗಿದ್ದು, ಕ್ರೈಂ ಬ್ರಾಂಚ್ ತನಿಖೆ ಕೈಗೆತ್ತಿಕೊಂಡಿದೆ.
2,62,000 ರೂ. ತನ್ನ ಖಾತೆಯಲ್ಲಿದೆ ಎಂದು ಹೇಳಿ ಈತ ಅನೇಕರನ್ನು ವಂಚಿರುವುದು ಪತ್ತೆಹಚ್ಚಲಾಗಿದೆ. ಎರ್ನಾಕುಳಂ ಕಾಲೂರಿನಲ್ಲಿ ಆತನ ಮನೆಯಿಂದ ಮಾನ್ಸನ್ ಮಾವುಂಗಲ್ ನನ್ನು ಬಂಧಿಸಲಾಗಿದೆ.
ಟಿಪ್ಪು ಸುಲ್ತಾನನ ಸಿಂಹಾಸನವಾಗಿ ಬಡಗಿ ಮಾಡಿದ ಕುರ್ಚಿಯನ್ನು ಚೇರ್ತಲದಲ್ಲಿ ಮಾರಿದ್ದನು. ಹಗರಣದ ಜೊತೆಗೆ, ಆತನು ಕೋಟ್ಯಂತರ ರೂಪಾಯಿಗಳನ್ನು ಎರವಲು ಪಡೆದುಕೊಂಡು ಜನರನ್ನು ಸೆಳೆದಿದ್ದಾನೆ ಎಂದು ಅಪರಾಧ ವಿಭಾಗವು ಹೇಳಿದೆ. ಪ್ರಸ್ತುತ, ಅಪರಾಧ ವಿಭಾಗವು ಹಣಕಾಸಿನ ವಂಚನೆಯ ಪ್ರಕರಣವನ್ನು ದಾಖಲಿಸಿದೆ.
ಡಾ.ಮಾನ್ಸನ್ ಮಾವುಂಕಲ್ ಎಂಬ ಹೆಸರಿಂದ ವಂಚಿಸಲಾಗಿದ್ದು, ಆದರೆ ಆತನಿಗೆ ಡಾಕ್ಟರೇಟ್ ಕೂಡ ಇಲ್ಲ ಎಂದು ಅಪರಾಧ ವಿಭಾಗ ಪತ್ತೆ ಮಾಡಿದೆ. ಐದು ಮಂದಿಯಿಂದ 10 ಕೋಟಿ ರೂ. ಗಳನ್ನು ಈತ ಪಡೆದಿದ್ದ. ಬಡ್ಡಿರಹಿತ ಸಾಲ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಯು ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.