ತಿರುವನಂತಪುರಂ: ಸೈಬರ್ ಆಧಾರಿತ ತನಿಖೆಗಳನ್ನು ಸಂಘಟಿಸಲು ಮತ್ತು ತಾಂತ್ರಿಕ ತಜ್ಞರ ಸೇವೆಗಳನ್ನು ಒದಗಿಸಲು ಸೈಬರ್ ಅಪರಾಧ ತನಿಖಾ ವಿಭಾಗವನ್ನು ರಾಜ್ಯ ಪೋಲಿಸ್ ಅಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಭಾರತದಲ್ಲಿ ಇಂತಹ ತಾಂತ್ರಿಕ ಘಟಕವನ್ನು ಹೊಂದಿರುವ ಮೊದಲ ಪೋಲೀಸ್ ಪಡೆ ಕೇರಳ ಪೋಲೀಸ್ ಆಗಿರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು.
ಅವರು ಕೇರಳ ಪೋಲಿಸ್ ಹ್ಯಾಕ್-ಪಿ 2021 ರ ಸಮಾರೋಪದಲ್ಲಿ ಮಾತನಾಡುತ್ತಿದ್ದರು, ಡಾರ್ಕ್ ವೆಬ್‍ನಲ್ಲಿ ಪರಿಣಾಮಕಾರಿಯಾಗಿ ಪೋಲಿಸ್ ಕ್ರಮಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಸಾಫ್ಟ್‍ವೇರ್ ನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಆನ್‍ಲೈನ್ ಹ್ಯಾಕಥಾನ್. ಡಾರ್ಕ್ ವೆಬ್‍ನ ರಹಸ್ಯಗಳನ್ನು ಬಿಚ್ಚಿಡಲು ಮತ್ತು ಅಪರಾಧವನ್ನು ವಿಶ್ಲೇಷಿಸಲು ಹ್ಯಾಕಥಾನ್ ಅಭಿವೃದ್ಧಿಪಡಿಸಿದ ಸಾಫ್ಟ್‍ವೇರ್ 'ಗ್ರ್ಯಾಪ್ನಲ್ 1.0' ನ ಯೋಜನಾ ಲಾಂಚ್ ನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿದರೆ ಮಾತ್ರ ಸೈಬರ್ ಅಪರಾಧವನ್ನು ನಿರ್ಮೂಲನೆ ಮಾಡಬಹುದು ಎಂದು ಅವರು ತಿಳಿಸಿದರು.
ಡಾರ್ಕ್ ವೆಬ್‍ನಲ್ಲಿ ಅಪರಾಧ ಚಟುವಟಿಕೆಯನ್ನು ಪತ್ತೆ ಮಾಡುವುದು ಸಾಮಾನ್ಯವಾಗಿ ಕಷ್ಟ. ಈ ಸಮಸ್ಯೆಗೆ ಪರಿಹಾರವಾಗಿ ಅಭಿವೃದ್ಧಿಪಡಿಸಲಾಗಿರುವ ಹೊಸ ಸಾಫ್ಟ್ ವೇರ್ ಕೇವಲ ಪೋಲೀಸರಿಗೆ ಮಾತ್ರವಲ್ಲ ದೇಶಕ್ಕೆ ಹೆಮ್ಮೆಯ ಮೂಲವಾಗಿದೆ ಎಂದು ಸಿಎಂ ಹೇಳಿದರು. ಲೈಂಗಿಕ ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಆರ್ಥಿಕ ವಂಚನೆಯಂತಹ ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ತನಿಖೆ ಮಾಡಲು ಈ ಸಾಫ್ಟ್‍ವೇರ್ ಅನ್ನು ಡಾರ್ಕ್ ವೆಬ್ ಮೂಲಕ ಬಳಸಬಹುದು.
ಸೈಬರ್ ಡೋಮಿನ್ ಆಶ್ರಯದಲ್ಲಿ ಸಮ್ಮೇಳನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದೆ. ಈ ವರ್ಷದ ಹ್ಯಾಕಥಾನ್ ಥೀಮ್ ಡಾರ್ಕ್ ವೆಬ್ ನ್ನು ನಿರ್ಮೂಲನೆ ಮಾಡುವುದು ಲಕ್ಷ್ಯವಾಗಿದೆ.
ಸಾರಿಗೆ ಸಚಿವ ಆಂಟನಿ ರಾಜು, ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್, ಎಡಿಜಿಪಿಗಳಾದ ಮನೋಜ್ ಅಬ್ರಹಾಂ ಮತ್ತು ವಿಜಯ್ ಎಸ್ ಸಖ್ರೆ, ಡಿಐಜಿ ಪಿ ಪ್ರಕಾಶ್, ಪಿಡಿಎಂ ಹಿರಿಯ ಉಪಾಧ್ಯಕ್ಷ ಜತೀಂದರ್ ಥಂಕರ್ ಮತ್ತು ಎಸ್ಬಿಐ ಜನರಲ್ ಮ್ಯಾನೇಜರ್ ಇಂದ್ರನಿಲ್ ಬಂಜಾ ಮತ್ತು ಇತರ ಹಿರಿಯ ಪೋಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.