ಕಾಸರಗೋಡು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾಸರಗೋಡು ನಗರಸಭೆಯಲ್ಲಿ ವಿಸ್ತೃತ ಕಾರ್ಯಕ್ರಮಗಳು ಜರುಗಲಿವೆ. ಗಾಂಧಿ ಜಯಂತಿ ದಿವಾಗಿರುವ ಅ.2 ವರೆಗೆ ಶುಚಿತ್ವ ಸಪ್ತಾಹವನ್ನು ನಡೆಸಲಾಗುವುದು.
ಇದರ ಅಂಗವಾಗಿ ನಗರಸಭೆಯ ಶುಚಿತ್ವ ಕಾರ್ಮಿಕರಿಗಾಗಿ ವೈದ್ಯಕೀಯ ಶಿಬಿರ, ಅಭಿನಂದನೆ ಇತ್ಯಾದಿ ಜರುಗಿದುವು. ನಗರಸಭೆ ಸಭಾಂಗಣದಲ್ಲಿ ಜರುಗಿದ ಸಮಾರಂಭವನ್ನು ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಂಷೀದಾ ಫೀರೋಝ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಅಬ್ಬಾಸ್ ಬೀಗಂ, ಸಿಯಾನಾ ಹನೀಫ್, ರೀತಾ ಆರ್., ಕೆ.ರಜನಿ, ಸದಸ್ಯರಾದ ಪಿ.ರಮೇಶ್, ಲಲಿತಾ, ಡಾ.ಮೇಘಾ, ಕಾರ್ಯದರ್ಶಿ ಎಸ್.ಬಿಜು ಮೊದಲಾದವರು ಉಪಸ್ಥಿತರಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕಾಲಿದ್ ಪೂಚಕ್ಕಾಡು ಸ್ವಾಗತಿಸಿದರು. ಆರೋಗ್ಯ ಮೇಲ್ವಿಚಾರಕ ಡಾ.ಆರ್.ರಂಜಿತ್ ವಂದಿಸಿದರು.