ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಶನಿವಾರ ಗುರುನೀತಿ-ಸಂಜಯ ರಾಯಭಾರ-ಯಕ್ಷಗಾನ ತಾಳಮದ್ದಳೆ ನಡೆಯಿತು.
ಕೇರಳರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಭಾಜನರಾದ ಸಂಘದ ಸಕ್ರಿಯ ಸದಸ್ಯ ನಾರಾಯಣ ದೇಲಂಪಾಡಿ ಅವರಿಗೆ ಅಭಿನಂದನಾ ಸಮಾರಂಭದ ಪ್ರಯುಕ್ತ ಆಯೋಜಿಸಿದ ಕಲಾ ಸೇವಾ ಕಾರ್ಯಕ್ರಮದ ಮೊದಲಿಗೆ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಬಳಿಕ ಸಂಘದ ಕಾರ್ಯದರ್ಶಿ ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ನಿರ್ದೇಶನದೊಂದಿಗೆ ಮುನ್ನಡೆದ ತಾಳಮದ್ದಳೆಯ ಭಾಗವತಿಕೆಯಲ್ಲಿ ಮಡ್ವ ಶಂಕರನಾರಾಯಣ ಭಟ್, ದಯಾನಂದ ಬಂದ್ಯಡ್ಕ, ನಿತೀಶ್ ಕುಮಾರ್ ಎಂಕಣ್ಣಮೂಲೆ ಭಾಗವಹಿಸಿದರು. ಚೆಂಡೆಮದ್ದಳೆ ವಾದನದಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ಕೆ. ಶಿವರಾಮ ಕಲ್ಲೂರಾಯ, ಬಿ.ಹೆಚ್.ಹೊನ್ನಪ್ಪ ಗೌಡ, ನಾರಾಯಣ ಪಾಟಾಳಿ ಮಯ್ಯಾಳ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ, ಡಿ.ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ವಿಕೇಶ್ ರೈ ಶೇಣಿ, ರಾಮನಾಯ್ಕ ದೇಲಂಪಾಡಿ, ಎಂ.ರಮಾನಂದ ರೈ ದೇಲಂಪಾಡಿ, ಕಲ್ಲಡ್ಕ ಗುತ್ತು ರಾಮಯ್ಯ ರೈ, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ದೇಲಂಪಾಡಿ, ಎಂ. ಐತ್ತಪ್ಪ ಗೌಡ ಮುದಿಯಾರು, ಬಿ.ಹೆಚ್.ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ ಹಳೆಮನೆ ಪಾತ್ರನಿರ್ವಹಣೆ ಮಾಡಿದರು. ಲತಾ ಆಚಾರ್ಯ ಬನಾರಿ ವಂದಿಸಿದರು.