ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಸಂಬಂಧ ಜಾಗ ತಪಾಸಣೆ ನಡೆಸಲಾಗಿದೆ.
ಈ ಸಂಬಂಧ 2 ಖಾಸಗಿ ಜಾಗಗಳ ತಪಾಸಣೆ ನಡೆದಿದೆ. ಶಾಸಕ ಎ.ಕೆ.ಎಂ.ಅಶ್ರಫ್, ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಷಮೀನಾ ಟೀಚರ್, ಉಪಾಧ್ಯಕ್ಷ ಮುಹಮ್ಮದ್ ಹನೀಫ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಸಿದ್ದೀಖ್, ಬ್ಲಾಕ್ ಪಂಚಾಯತ್ ಶಿಕ್ಷಣ-ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಷಂಸೀನಾ, ಗ್ರಾಮ ಪಂಚಾಯತ್ ಸದಸ್ಯರಾದ ಷಂಸೀನಾ, ಮುಸ್ತಫಾ ಉದ್ಯಾವರ, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯಬಿ.ಎ.ಮಜೀದ್, ಕಾಸರಗೋಡು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಶಿಕ್ಷಕರಾದ ಪಿ.ವೈ.ಸೋಲಮನ್, ಸುನಿಲ್ ಕುಮಾರ್, ಪಿ.ಕೆ.ಶ್ರೀಜೇಶ್ ತಂಡದಲ್ಲಿದ್ದರು.
ಜಿಲ್ಲೆಯ ಉತ್ತರ ವಲಯದ ಕರ್ನಾಟಕ ಗಡಿಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ತಲೆದೋರುತ್ತಿರುವ ಕೊರತೆಗಳ ಬಗ್ಗೆ ಶಾಸಕ ಎ.ಕೆ.ಎಂ.ಅಶ್ರಫ್ ಅವರು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಆದೇಶದಂತೆ ಜಾಗ ಪರಿಶೀಲನೆ ನಡೆಸಲಾಗಿದೆ.