HEALTH TIPS

ನಾರಾಯಣ ದೇಲಂಪಾಡಿ ಅವರಿಗೆ ರಾಜ್ಯ ಶ್ರೇಷ್ಠ ಶಿಕ್ಷಕ ಪುರಸ್ಕಾರ

                    ಕಾಸರಗೋಡು: ಕೇರಳ ರಾಜ್ಯ ಸರ್ಕಾರ ನೀಡುವ 2021 -22 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕನ್ನಡಿಗರಾದ ನಾರಾಯಣ ದೇಲಂಪಾಡಿ ಅವರಿಗೆ ಲಭ್ಯವಾಗಿದೆ. ಪ್ರಸ್ತುತ ಎಸ್.ಎಸ್.ಕೆ ಕಾಸರಗೋಡಿನ ಡಿಸ್ಟ್ರಿಕ್ಟ್ ಪೆÇ್ರೀಗ್ರಾಮ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾರಾಯಣ ದೇಲಂಪಾಡಿಯವರು ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಬಹುಮುಖ ಪ್ರತಿಭಾವಂತರಾಗಿದ್ದಾರೆ. ಕೇರಳ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆ ಹೊಂದಿ 2001ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ತಾನು ಕಲಿತ ಜಿ.ಎಚ್.ಎಸ್ ದೇಲಂಪಾಡಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಗ್ರಾಮೀಣ ಪ್ರದೇಶದ ಈ ಶಾಲೆಯ ಚಿತ್ರಣವನ್ನೇ ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಧನಾತ್ಮಕ ಬದಲಾವಣೆಗಳನ್ನು ತರುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬಳಿಕ 2005ರಲ್ಲಿ ಐ.ಟಿ @sಛಿhooಟ ನಲ್ಲಿ ಮಾಸ್ಟರ್ ಟ್ರೈನರ್ ಆಗಿ ಆಯ್ಕೆಗೊಂಡರು. ಸುಮಾರು 2000 ಕ್ಕಿಂತಲೂ ಹೆಚ್ಚಿನ ಶಿಕ್ಷಕರಿಗೆ ರಾಜ್ಯ ಹಂತ ಮತ್ತು ತಾಲೂಕು ಹಂತದಲ್ಲಿ ತರಬೇತಿಯನ್ನು ನೀಡಿದರು. ಐ.ಟಿ @sಛಿhooಟ ನಲ್ಲಿ    ಸರಿ ಸುಮಾರು ಎಂಟೂವರೆ ವರ್ಷದ ತಮ್ಮ ಮಾಸ್ಟರ್  ಟ್ರೈನರ್ ಸೇವೆಯ ಅವಧಿಯಲ್ಲಿ ಅನೇಕ ರಾಜ್ಯ ಮತ್ತು ತಾಲೂಕು ಮಟ್ಟದ ಕಾರ್ಯಾಗಾರಗಳಲ್ಲಿ ತರಬೇತಿ ಮೊಡ್ಯೂಲ್ ಗಳ ತಯಾರಿ, ಸಾಫ್ಟ್ವೇರ್ ಪ್ಯಾಕೇಜುಗಳು, ಪಾಠ ಪುಸ್ತಕ , ಅಧ್ಯಾಪಕ ಕೈಪಿಡಿ ತಯಾರಿ ಮತ್ತು ಭಾಷಾಂತರ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2014ರಲ್ಲಿ  ಡಯಟ್ ಕಾಸರಗೋಡಿಗೆ ಅಧ್ಯಾಪಕ ತರಬೇತುದಾರರಾಗಿ ಸೇರಿದ ಇವರು ಮೂಲಭೂತ ವಿದ್ಯಾಭ್ಯಾಸ, ಮನಃಶಾಸ್ತ್ರ, ಸಮಾಜ ವಿಜ್ಞಾನ ಮತ್ತು ಕನ್ನಡ ಭಾಷೆಯನ್ನು ಕಲಿಸುವುದರೊಂದಿಗೆ  ಪಠ್ಯೇತರ ಚಟುವಟಿಕೆಗಳಲ್ಲೂ ಅಧ್ಯಾಪಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಲ್ಲರ ನೆಚ್ಚಿನ ಅಧ್ಯಾಪಕರೆಂದೆನಿಸಿಕೊಂಡರು. ಸ್ವತಃ ಯಕ್ಷಗಾನ ಪ್ರಿಯರಾಗಿದ್ದು ಆ ಕಲೆಯ ಒಲವನ್ನು ತಮ್ಮ ಅಧ್ಯಾಪಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಮೂಲಕ ಪಸರಿಸಿದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿಯನ್ನು ಮೂಡಿಸುವಂತಹ ಸಾಹಿತ್ಯ ಸಭೆಯನ್ನು ಆರಂಭಿಸಿದರು. ತುಳುನಾಡ ಸಂಸ್ಕøತಿಯನ್ನು ಪ್ರತಿಬಿಂಬಿಸುವ 'ಆಟಿಡೊಂಜಿ ಕೂಟ' ಎಂಬ ಕಾರ್ಯಕ್ರಮಗಳನ್ನು ಡಯಟ್ ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆರಂಭಿಸಿದರು. 2016 ಡಿಸೆಂಬರ್ 13ರಂದು ಜಿಎಚ್ ಎಸ್ ಎಸ್ ಪಾಂಡಿ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಭರ್ತಿ ಗೊಂಡರು.

                  ಯಕ್ಷಗಾನ ಪ್ರಿಯರಾಗಿದ್ದ ಇವರು ಬಣ್ಣದ ಮಹಾಲಿಂಗ ಪ್ರತಿಷ್ಠಾನವನ್ನು ಆರಂಭಿಸಿ ಗಂಡುಕಲೆಯನ್ನು ಉಳಿಸುವಲ್ಲಿ ಸಾರ್ಥಕ ಪ್ರಯತ್ನವನ್ನು ನಡೆಸಿದರು. ಉತ್ತಮ ಬರಹಗಾರರಾದ ಇವರು ಗ್ರಾಮೀಣ ಪ್ರದೇಶದ ಸಂಸ್ಕೃತಿಗೆ ಒತ್ತು ನೀಡುವಂಥ

                  ಪೆಲಕ್ಕಾಯಿ, ಆಟಿ ತಿಂಗಳು, ಅಗೆಲ್, ಚೆನ್ನೆಮಣೆ,ಪರ್ಬೊ, ಕೆಡ್ಡಸ,ಉಂದು ಆಟೊ, ಕಾಸರಗೋಡುದ ತುಳು ಬಾಸೆದ ಪೆÇಲಬು ಇತ್ಯಾದಿ ತುಳು ಬರಹಗಳನ್ನೂ ದೇಲಂಪಾಡಿಯ ಭೂತಗಳು, ದೇಲಂಪಾಡಿಯ ಶಿಕ್ಷಕರು, ದೇಲಂಪಾಡಿ ಸಾರಿಗೆ ವ್ಯವಸ್ಥೆ, ಮುಗೇರಿನ ಕೋಳಿಕಟ್ಟ, ಶಿವರಾತ್ರಿಯ ಆ ರಾತ್ರಿಗಳು, ಊರೊಳಗಿನ ಊರುಗಳು ಇತ್ಯಾದಿ ಅನೇಕ ಕನ್ನಡ  ಬರಹಗಳ ಮೂಲಕ ಸಾಹಿತ್ಯಕೃಷಿಯನ್ನು  ನಡೆಸಿದವರಾಗಿದ್ದಾರೆ. ಉತ್ತಮ ವಾಗ್ಮಿ ಫೆÇೀಟೋಗ್ರಾಫರ್ ,ಬರಹಗಾರ ಸರಳ ಸಜ್ಜನಿಕೆಯ ಸ್ವಭಾವವನ್ನು ಹೊಂದಿದ್ದ ಶ್ರೀಯುತರಾದ ನಾರಾಯಣ ದೇಲಂಪಾಡಿಯವರಿಗೆ ಕೇರಳ ರಾಜ್ಯ ಸರಕಾರ ನೀಡುವ2021- 22 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುವುದು ಕಾಸರಗೋಡಿನ ಕನ್ನಡಿಗರಾದ ನಮಗೆಲ್ಲರಿಗೂ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries