ವಿಯೆನ್ನಾ: ಪರಮಾಣು ಶಕ್ತಿಯನ್ನು ಶಾಂತಿಯುತ ಕಾರ್ಯಕ್ಕೆ ಬಳಸುವುದನ್ನು ಪ್ರತಿಪಾದಿಸುವ ಪ್ರತಿಷ್ಟಿತ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ)ಯ ಬಾಹ್ಯ ಲೆಕ್ಕಪರಿಶೋಧಕರಾಗಿ ಭಾರತದ ಸಿಎಜಿ ಜಿಸಿ ಮುರ್ಮು ಆಯ್ಕೆಯಾಗಿದ್ದಾರೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.
ಐಎಇಯ ವಾರ್ಷಿಕ ಅಧಿವೇಶನದ ಸಂದರ್ಭ ನಡೆದ ಆಯ್ಕೆ ಪ್ರಕ್ರಿಯೆಯ ಸಂದರ್ಭ ಭಾರತದ ಸಿಎಜಿ(ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು) ಮರ್ಮುರನ್ನು ಹೆಚ್ಚಿನ ಸದಸ್ಯರು ಬೆಂಬಲಿಸಿದರು. ಇವರ ಕಾರ್ಯಾವಧಿ 2022ರಿಂದ 2027ರವರೆಗೆ ಇರಲಿದೆ. ಅಂತರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಸ್ಥಾನಮಾನಕ್ಕೆ ದೊರೆತ ಮಾನ್ಯತೆ ಮತ್ತು ಭಾರತದ ಸಿಎಜಿಯ ವಿಶ್ವಾಸಾರ್ಹತೆ, ವೃತ್ತಿಪರತೆ ಮತ್ತು ಅನುಭವಕ್ಕೆ ಸಂದ ಗೌರವ ಇದಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಕಳೆದ ವರ್ಷದ ಆಗಸ್ಟ್ 8ರಂದು ಮುರ್ಮು ಭಾರತದ ಸಿಎಜಿ ಆಗಿ ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಪ್ರಥಮ ಲೆಫ್ಟಿನೆಂಟ್ ಗವರ್ನರ್ ಸಹಿತ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.