ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೃಷಿ, ಕೃಷಿಯೇತರ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆ ಸಂಬಂದ ವೆಬಿನಾರ್ ಜರುಗಿತು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಜಿಲ್ಲಾ ಉದ್ದಿಮೆ ಕೇಂದ್ರ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಿತು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕೃಷಿ ವಿವಿ ಸಹಾಯಕ ಪ್ರಾಚಾರ್ಯ ಡಾ.ಸಿ.ವಿ.ಕೃಷ್ಣ ಮತ್ತು ವಯನಾಡು ಗ್ಲೋಬಲ್ ಇನ್ಸ್ ಸ್ಟಿಟ್ಯೂಟ್ ಷೆಫ್ ಪ್ರದೀಪ್ ಉಪನ್ಯಾಸ ನಡೆಸಿದರು. ಜಿಲ್ಲಾ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಸಜಿತ್ ಕುಮಾರ್ ಕೆ. ಸ್ವಾಗತಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆ ಪ್ರಬಂಧಕ ಎಂ.ಎಂ.ತಂಗಚ್ಚನ್ ವಂದಿಸಿದರು.