ಕೊಚ್ಚಿ: ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಹೈಕೋರ್ಟ್ ಮತ್ತೊಮ್ಮೆ ಪೆÇಲೀಸರಿಗೆ ನಿರ್ದೇಶನ ನೀಡಿದೆ. ನಾಗರಿಕರ ವಿರುದ್ಧ ಆಕ್ಷೇಪಾರ್ಹ ಪದಗಳು ಬರುತ್ತಿವೆಯೆಂಬ ದೂರಿನ ಮೇರೆಗೆ ನ್ಯಾಯಾಲಯ ಈ ನಿರ್ದೆಶನ ನೀಡಿದೆ. ಕಟು ಶಬ್ದಗಳು, ದೀಮಾಕಿನ ವರ್ತನೆಗಳು ಬಳಸಬಾರದೆಂದು ಆದೇಶವಿದ್ದರೂ ನ್ಯಾಯಾಲಯಕ್ಕೆ ಮತ್ತೆ ದೂರು ಬಂದಿರುವುದರಿಂದ ಹೈಕೋರ್ಟ್ ಈ ಬಗ್ಗೆ ಪುನರುಚ್ಚರಿಸಬೇಕಾಯಿತು.
ಕೊಲ್ಲಂನಲ್ಲಿ ವಾಹನ ತಪಾಸಣೆ ವೇಳೆ ವೈದ್ಯರೊಬ್ಬರನ್ನು ಪೋಲೀಸರು ಎಡಾ ಎಂದು ಸಂಬೋಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಪೋಲೀಸರಿಗೆ ಸಭ್ಯ ಮತ್ತು ಗೌರವಯುತ ಭಾಷೆಯನ್ನು ಹೇಗೆ ಬಳಸುವುದು ಎಂದು ತಿಳಿದಿಲ್ಲ ಮತ್ತು ನ್ಯಾಯಾಲಯ ಏನೇ ಹೇಳಿದರೂ ಪೋಲೀಸರು ಒಳ್ಳೆಯವರಾಗರು ಎಂದೂ ದೇವನ್ ರಾಮಚಂದ್ರನ್ ಕಳವಳ ವ್ಯಕ್ತಪಡಿಸಿದರು.
ಅಧಿಕಾರಿಯ ಕಡೆಯಿಂದ ಯಾವುದೇ ಗಂಭೀರ ಲೋಪವಾಗಿಲ್ಲ ಎಂಬ ಸಹಾಯಕ ಆಯುಕ್ತರ ವರದಿಯ ಮೇಲೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಯ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವಿವರವಾದ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.