ಕಾಸರಗೋಡು: ಅನರ್ಹರು ಆದ್ಯತೆ/ ಎ.ಎ.ವೈ. ವಿಭಾಗದ ಪಡಿತರ ಚೀಟಿ ಇರಿಸಿಕೊಮಡಿದ್ದರೆ ತಕ್ಷಣ ಇವನ್ನು ಆಯಾ ತಾಲೂಕು ಸಪ್ಲೈ ಕಚೇರಿಗೆ ಮರಳಿ ಸಲ್ಲಿಸಬೇಕು. ಅನರ್ಹರು ಆದ್ಯತೆ ಪಡಿತರ ಚೀಟಿ ಇರಿಸಿಕೊಳ್ಳುವುದು ಕಾನೂನು ರೀತ್ಯಾ ಅಪರಾಧ ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿದರು.
ಒಂದೊಮ್ಮೆ ತನಿಖೆಯಲ್ಲಿ ಅನರ್ಹರು ಆದ್ಯತೆ ಪಡಿತರ ಚೀಟಿ ಹೊಂದಿರುವುದು ಪತ್ತೆಯಾದಲ್ಲಿ ಈ ವರೆಗೆ ಖರಿದಿಸಿದ ಪಡಿತರ ಸಾಮಾಗ್ರಿಗಳ ದರವನ್ನು ಮಾರುಕಟ್ಟೆಯ ದರಕ್ಕೆ ಸಮನಾಗಿ ದಂಡ ರೂಪದಲ್ಲಿ ಈಡು ಮಾಡಲಾಗುವುದು. ಸರಕಾರಿ/ಅರೆ ಸರಕಾರಿ/ ಸಾರ್ವಜನಿಕ/ ಬಾಂಕಿಂಗ್ ವಲಯಗಳ ಸಿಬ್ಬಂದಿ, ಸೇವಾ ಪಿಂಚಣಿ ಪಡೆಯುತ್ತಿರುವವರು ಆದ್ಯತೆ/ ಎ.ಎ.ವೈ. ಪಡಿತರ ಚೀಟಿ ಹೊಂದಿರಕೂಡದು. ಇಂಥಾ ಅಕ್ರಮಗಳು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಆಯಾ ತಾಲೂಕು ಕಚೇರಿಗೆ ದೂರು ಸಲ್ಲಿಸಬಹುದು.
ಕಾಸರಗೋಡು ಜಿಲ್ಲಾ ಸಪ್ಲೈ ಕಚೇರಿ: 04994-255138.,
ಕಾಸರಗೋಡು ತಾಲೂಕು ಸಪ್ಲೈ ಕಚೇರಿ: 04994-230108.,
ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ: 04998-240089.
ಹೊಸದುರ್ಗ ತಾಲೂಕು ಸಪ್ಲೈ ಕಚೇರಿ: 04994-2204044.
ವೆಳ್ಳರಿಕುಂಡ್ ತಾಲೂಕು ಸಪ್ಲೈ ಕಚೇರಿ: 0467-2247720.