ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ಆತಂಕ ಇನ್ನೂ ದೂರವಾಗಿಲ್ಲ. ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಕೆಯ ಹೊರತಾಗಿಯೂ, ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬರಬಹುದು. ಅಧಿಕ ಟಿಪಿಆರ್ ದರ ಕೂಡ ಆರೋಗ್ಯ ಇಲಾಖೆಗೆ ತಲೆನೋವಾಗಿದೆ.
ಸತತ ದಿನಗಳಲ್ಲಿ ರೋಗಿಗಳ ಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿತ್ತು. ಆದರೆ ನಿನ್ನೆ(ಗುರುವಾರ) ಮತ್ತದು ಇಪ್ಪತ್ತೆರಡು ಸಾವಿರಕ್ಕಿಂತ ಹೆಚ್ಚಿತ್ತು. ಪರೀಕ್ಷಾ ಸಕಾರಾತ್ಮಕತೆಯ ದರವು ಶೇಕಡಾ 15 ಕ್ಕಿಂತ ಕಡಿಮೆಯಿರಬಹುದೆಂದು ನಿರೀಕ್ಷಿಸಲಾಗಿತ್ತು, ಇದು ಕೂಡ 18 ಶೇಕಡಕ್ಕಿಂತ ಹೆಚ್ಚಾಗಿದೆ. ಇದು ಆರೋಗ್ಯ ಇಲಾಖೆ ಮತ್ತು ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ರೋಗದ ಹರಡುವಿಕೆಯನ್ನು ದೊಡ್ಡ ರೀತಿಯಲ್ಲಿ ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ಮಧ್ಯೆ ಈ ಹೆಚ್ಚಳ ಕಳವಳಕ್ಕೀಡುಮಾಡಿದೆ. ಕಳೆದ ಕೆಲವು ದಿನಗಳಲ್ಲಿ, 15,000 ರೋಗಿಗಳನ್ನು ಒಂದು ಲಕ್ಷ ಪರೀಕ್ಷೆಗಳಲ್ಲಿ ಪತ್ತೆಹಚ್ಚಲಾಗಿತ್ತು. ನಿನ್ನೆ, ಒಂದು ಲಕ್ಷ ಇಪ್ಪತ್ತೈದು ಸಾವಿರ ಪರೀಕ್ಷೆಗಳನ್ನು ನಡೆಸಿದಾಗ, ವೈರಸ್ ಪ್ರಕರಣಗಳ ಸಂಖ್ಯೆ 20,000 ದಾಟಿದೆ ಮತ್ತು ಇದು ತುಂಬಾ ಗಂಭೀರವಾಗಿದೆ.
ದಿನವೊಂದಕ್ಕೆ ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ನಿನ್ನೆ ಮಾತ್ರ, 178 ಮಂದಿ ಕೊರೋನಾದಿಂದ ಮೃತಪಟ್ಟಿರುವುದು ದೃಢಪಟ್ಟಿತ್ತು. ಸರ್ಕಾರವು ಸಾವುಗಳನ್ನು ಮುಚ್ಚಿಟ್ಟರೂ, ಸುಪ್ರೀಂ ಕೋರ್ಟ್ ಆದೇಶದ ನಂತರ ನಿಜವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ವಾರದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಅನಿಯಂತ್ರಿತವಾಗಿ ಇಳಿಯುತ್ತದೆ ಎಂದು ತಜ್ಞರು ಮೊದಲೇ ಊಹಿಸಿದ್ದರು. ಆದರೆ ಮತ್ತೆ, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ಮತ್ತು ಕಡಿಮೆಯಾಗುತ್ತಿರುವ ಗುಣಮುಖರಾಗುವವರ ಸಂಖ್ಯೆ ತಜ್ಞರಲ್ಲಿ ಕಳವಳವನ್ನು ಉಂಟುಮಾಡುತ್ತಿದೆ.
ಆದರೆ ರೋಗ ಹರಡುವಿಕೆ ಹೆಚ್ಚಿರುತ್ತಾ ನಿಯಂತ್ರಣಗಳು ಅಗತ್ಯವಿಲ್ಲ ಎಂದು ಸರ್ಕಾರ ಇಗಲೂ ಹಳೆಯ ನಿರ್ಧಾರವನ್ನೇ ಗಟ್ಟಿಗೊಳಿಸಿದೆ. ಈ ಮಧ್ಯೆ ನಾಳೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಹೊಸ ತೀರ್ಮಾನಗಳನ್ನು ನಿರೀಕ್ಷಿಸಲಾಗಿದೆ.