ತಿರುವನಂತಪುರಂ: ಕೋವಿಡ್ ಪರೀಕ್ಷಾ ಧನಾತ್ಮಕ ದರ ಕಡಿಮೆಯಾದರೆ ರಾಜ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಸಂಸ್ಕøತಿ ಸಚಿವ ಸಜಿ ಚೆರಿಯನ್ ಹೇಳಿದ್ದಾರೆ. ಅವರು ತಿರುವನಂತಪುರಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೊರೋನಾ ಪ್ರಸರಣವು ಡಿಸೆಂಬರ್ ವೇಳೆಗೆ ಧನಾತ್ಮಕವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಆ ಬಳಿಕ, ಚಿತ್ರಮಂದಿರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಪ್ರಸ್ತುತ ಚಿತ್ರಮಂದಿರಗಳನ್ನು ತೆರೆಯುವುದರಿಂದ ನಿಯಂತ್ರಣ ಕ್ರಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಗಮನಸೆಳೆದರು.
ಎರಡನೇ ತರಂಗವು ರಾಜ್ಯವನ್ನು ಅಪ್ಪಳಿಸಿದ ನಂತರ ಲಾಕ್‍ಡೌನ್ ಘೋಷಿಸಿದ್ದರಿಂದ ಥಿಯೇಟರ್‍ಗಳನ್ನು ಮುಚ್ಚಲಾಯಿತು. ನಂತರ, ವಿವಿಧ ಪ್ರದೇಶಗಳಲ್ಲಿ ವಿನಾಯಿತಿಗಳನ್ನು ನೀಡಲಾಯಿತು. ಆದರೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿಸಿಲ್ಲ. ಆದ್ದರಿಂದ, ರಾಜ್ಯದಲ್ಲಿ ಚಲನಚಿತ್ರ ಉದ್ಯಮವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.