ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ತನ್ನ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಗಳಿಗೆ ಮಾಡ್ಯುಲಾರ್ ಕಂಟೈನರ್ ಆಧಾರಿತ ವಸತಿಗಳನ್ನು ಕಲ್ಪಿಸಿದೆ ಎಂಬ ಮಾಹಿತಿ ಸ್ಥಳೀಯ ಬೆಳವಣಿಗೆಯ ಬಗ್ಗೆ ಅರಿವಿರುವ ಮೂಲಗಳಿಂದ ತಿಳಿದುಬಂದಿದೆ.
ತಶಿಗಾಂಗ್, ಮಾಂಜಾ, ಹಾಟ್ ಸ್ಪ್ರಿಂಗ್ಸ್ ಮತ್ತು ಚುರುಪ್ ಗಳಲ್ಲಿ ಚೀನಾ ತನ್ನ ಸಿಬ್ಬಂದಿಗಳಿಗೆ ಈ ರೀತಿಯ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಪಿಎಲ್‌ಎ ಸಿಬ್ಬಂದಿಗಳು ತನ್ನ ದುಸ್ಸಾಹಸಕ್ಕೆ ಕಳೆದ ವರ್ಷ ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರದಿಂದ ತತ್ತರಿಸಿದ್ದು ಸ್ಥಳೀಯವಾಗಿ ಚೀನಾ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳನ್ನು ನಿಯೋಜಿಸುತ್ತಿದೆ ಹಾಗೂ ಮೂಲಸೌಕರ್ಯವನ್ನು ಈ ಪ್ರದೇಶದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ.
ಗಲ್ವಾನ್ ಕಣಿವೆಯಲ್ಲಿ ಘರ್ಷಣೆಯ ನಂತರ ಚೀನಾ ತಾನು ಎಂದಿಗೂ ನಿಯೋಜಿಸದ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇನಾ ಪಡೆಗಳನ್ನು ನಿಯೋಜಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ನಮ್ಮ ಕಾರ್ಯತಂತ್ರ ಅವರಿಗೆ ನೋವುಂಟುಮಾಡುತ್ತಿದೆ; ನಮ್ಮ ಪ್ರತಿಕ್ರಿಯೆಗೆ ಚೀನಾದವರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಗಲ್ವಾನ್ ಕಣಿವೆಯ ಎಲ್‌ಒಸಿಯಲ್ಲಿ ಚೀನಾದ ಪಿಎಲ್‌ಎ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವಂತಾಗಿದೆ. ಈ ಹವಾಮಾನದಲ್ಲಿ ಚೀನಾದ ಮಂದಿ ಎಂದಿಗೂ ಕಾರ್ಯಾಚರಣೆ ನಡೆಸಿರಲಿಲ್ಲ. ಆದ್ದರಿಂದ ಅವರ ವಿಶ್ವಾಸ ಕುಗ್ಗುತ್ತಿದ್ದು ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮೊರೆ ಹೋಗಿದೆ ಎನ್ನುತ್ತಾರೆ ಸ್ಥಳೀಯರು.
ಈ ನಡುವೆ ಭಾರತ ಈಶಾನ್ಯ ಲಡಾಖ್ ಹಾಗೂ ಎಲ್‌ಎಸಿಗೆ 3,500 ಕಿ.ಮೀ ವ್ಯಾಪ್ತಿಯಲ್ಲಿ ಟನಲ್ ಗಳ ನಿರ್ಮಾಣ, ಸೇತುವೆ ರಸ್ತೆಗಳಂತಹ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತಿದೆ.
ಇತ್ತ ಚೀನಾ ಸಹ ಈಶಾನ್ಯ ಲಡಾಖ್ ನ ಬಳಿಯ ತನ್ನ ಪ್ರದೇಶದಲ್ಲಿ ತನ್ನ ವಾಯುನೆಲೆಗಳು, ರಕ್ಷಣಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೂಕ್ಷ್ಮ ಪ್ರದೇಶವಾಗಿರುವ ಎಲ್‌ಎಸಿಯಲ್ಲಿ ಉಭಯ ರಾಷ್ಟ್ರಗಳ ಬಳಿ ತಲಾ 50,000-60,000 ತುಕಡಿಗಳಿವೆ.