ಕುಂಬಳೆ: ಕುಂಬಳೆ ಕರಾವಳಿ ಪೋಲೀಸ್ ಠಾಣೆ ವ್ಯಾಪ್ತಿಯ ಕಣ್ವತೀರ್ಥ, ಮುಸೋಡಿ, ಪೆರಿಂಗಡಿ, ಶಿರಿಯಾ ಮತ್ತು ಮಣಿಮುಂಡದಲ್ಲಿ ಅಂತರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನದ ಅ|ಂಗವಾಗಿ ಭಾನುವಾರ ಕರಾವಳಿ ನಿವಾಸಿಗಳು, ಮೀನುಗಾರರ ಕ್ಲಬ್‍ಗಳು ಮತ್ತು ವ್ಯಾಪಾರಿಗಳ ಸಹಕಾರದೊಂದಿಗೆ ಆಪರೇಷನ್ ಬ್ಲೂ ಬೀಟ್ಸ್ ಆಯೋಜಿಸಲಾಗಿತ್ತು.
ಕುಂಬಳೆ ಕರಾವಳಿ ಇನ್ಸ್‍ಪೆಕ್ಟರ್ ಎಸ್.ಎಚ್.ಒ. ದಿಲೀಶ್ ಕೆ. ಕಣ್ವತೀರ್ಥದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿದರು. ಬೀಟ್ ಅಧಿಕಾರಿ ದೀಪಕ್ ಕೆ ಮತ್ತು ವಾರ್ಡ್ ಸದಸ್ಯ ಲಕ್ಷ್ಮಣ ಮಾತನಾಡಿದರು.
ಉಪ್ಪಳ ಮುಸೋಡಿಯಲ್ಲಿ ನಡೆದ ಕಾರ್ಯಕ್ರಮವನ್ನೂ ದಿಲೀಶ್ ಕೆ ಉದ್ಘಾಟಿಸಿದರು. ಬೀಟ್ ಅಧಿಕಾರಿಗಳಾದ ಪ್ರದೀಪ್ ಮತ್ತು ಸೂರಜ್ ಹಾಗೂ ಮೀನುಗಾರರ ಕಲ್ಯಾಣ ನಿಧಿ ಮಂಡಳಿ ಸದಸ್ಯ ಶೇಕುಂಞÂ ಮಾತನಾಡಿದರು.
ಪೆರಿಂಗಡಿಯಲ್ಲಿ ವಾರ್ಡ್ ಸದಸ್ಯ ಇಬ್ರಾಹಿಂ ಸಮಾರಂಭವನ್ನು ಉದ್ಘಾಟಿಸಿದರು. ಬೀಟ್ ಅಧಿಕಾರಿಗಳಾದ ನಜೇಶ್ ಮತ್ತು ಸುಮೇಶ್ ಮಾತನಾಡಿದರು.
ಉಪ್ಪಳ ಮಣಿಮುಂಡದಲ್ಲಿ ಕರಾವಳಿ ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ಕುಂಞÂ್ಞ ಕೃಷ್ಣನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅಶ್ರಫ್ ಮತ್ತು ಬೀಟ್ ಅಧಿಕಾರಿ ನಿಶಾಂತ್ ಮಾತನಾಡಿದರು.
ಶಿರಿಯದಲ್ಲಿ ಕರಾವಳಿ ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ರಾಮಚಂದ್ರನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಬ್ ಇನ್ಸ್‍ಪೆಕ್ಟರ್ ಮೋಹನನ್, ಸಹಾಯಕ ಸಬ್ ಇನ್ಸ್‍ಪೆಕ್ಟರ್‍ಗಳಾದ ಅಜೀಜ್ ಮತ್ತು ಮಿಗ್ದಾದ್ ಮತ್ತು ಬೀಟ್ ಅಧಿಕಾರಿ ಶನೋಜ್ ಮಾತನಾಡಿದರು.