ಕಾಸರಗೋಡು: ರಾಜ್ಯ ಸರಕಾರದ 100 ದಿನಗಳ ಕ್ರೀಯಾ ಯೋಜನೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ "ಟೇಕ್ ಎ ಬ್ರೇಕ್" ಯೋಜನೆ ಪ್ರಕಾರ ನಿರ್ಮಿಸಲಾದ ಶೌಚಾಲಯದ ಉದ್ಘಾಟನೆ ಇಂದು(ಸೆ.7ರಂದು) ನಡೆಯಲಿದೆ.
ಬೇಡಡ್ಕ ಗ್ರಾಮ ಪಂಚಾಯತ್ ನ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಉದುಮಾ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಉದ್ಘಾಟಿಸುವರು. ಬೇಡಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನ್ಯಾ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ್ವಆನವಾಝ್ ಪಾದೂರು, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಿಜಿ ಮಾಥ್ಯೂ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಮುಖ್ಯ ಅತಿಥಿಗಳಾಗಿರುವರು.
ಟೇಕ್ ಎ ಬ್ರೇಕ್ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆ ಸೆ.7ರಂದು ನಡೆಯಲಿದ್ದು, ಸ್ಥಳೀಯಾಡಳಿತ, ಗ್ರಾಮಾಭಿವೃದ್ಧಿ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಸ್ಟರ್ ಆನ್ ಲೈನ್ ರೂಪದಲ್ಲಿ ಉದ್ಘಾಟಿಸುವರು.