ಕಾಸರಗೋಡು: ಕೇರಳ ವಿದ್ಯುತ್ ಮಜ್ದೂರ್ ಸಂಘ್(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಯಿತು. ಕೇರಳ ಸರ್ಕಾರ ಕೆಎಸ್‍ಇಬಿ ಖಾಸಗೀಕರಣಕ್ಕೆ ಮುಂದಾಗಿರುವ ಕ್ರಮ ಕೈಬಿಡಬೇಕು, ಕೇರಳ ರೆಗ್ಯುಲೇಟರಿ ಕಮಿಶನ್‍ನ ಖಾಸಗೀಕರಣದ ಕರಡು ರೇಖೆ ಉಪೇಕ್ಷಿಸಬೇಕು, ಕೆಎಸ್‍ಇಬಿಯನ್ನು ಅಧ:ಪತನದತ್ತ ತಳ್ಳುವ ಸರ್ಕಾರದ ಧೋರಣೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಧರಣಿ ಆಯೋಜಿಸಲಾಗಿತ್ತು.
ಕೆವಿಎಂಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಕಾಸರಗೋಡು ಜಿಲ್ಲಾ ಉಸ್ತುವಾರಿ ಮಹೇಂದ್ರರಾಜ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಗೋವಿಂದನ್ ಮಡಿಕೈ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸನ್, ಅನಿಲ್ ಬಿ.ನಾಯರ್, ಹರೀಶ್ ಕುದ್ರೆಪ್ಪಾಡಿ, ಬಾಬು ದೇಳಿ, ಗೋಪಿನಾಥ್, ಸಉನಿಲ್ ಉಪಸ್ಥಿತರಿದ್ದರು.