ತಿರುವನಂತಪುರಂ: ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುವುದನ್ನು ನಿಯಂತ್ರಿಸಲು ಮತ್ತು ತಡೆಯಲು ಮಹಲುಗಳ ಪುರೋಹಿತರನ್ನು ಒಳಗೊಂಡು ಕೌಂಟರ್ ರಾಡಿಕಲೈಸೇಶನ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಯುವಕರು ಮತೀಯ ತೀವ್ರವಾದ, ಧಾರ್ಮಿಕ ದೃಷ್ಟಿಕೋನಗಳ ಮೂಲಕ ಐಎಸ್ ಸಿದ್ಧಾಂತದಲ್ಲಿ ಆಕರ್ಷಿತರಾಗುತ್ತಿರುವುದು ಅಗತ್ಯವಿದೆ ಎಂದರು.
ಭಯೋತ್ಪಾದಕ ಸಂಘಟನೆಗಳು ಸಮಾಜಕ್ಕೆ ತಲುಪದಂತೆ ತಡೆಯಲು ಮಹಲ್ ಪುರೋಹಿತರು ಮತ್ತು ಮಹಲ್ ಅಧಿಕಾರಿಗಳಿಂದ ಕೌಂಟರ್-ರಾಡಿಕಲೈಸೇಶನ್ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆದರೆ ಕೊರೋನಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗಳು 2020 ರಿಂದ ನಿಲ್ಲಿಸಲಾಗಿದೆ. ಅದನ್ನು ಮರುಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದ ವಿಶೇಷ ಶಾಖೆಯು 2018 ರಿಂದ ಡಿ-ರಾಡಿಕಲೈಸೇಶನ್ ಕಾರ್ಯಕ್ರಮಗಳನ್ನು ಆರಂಭಿಸಿತ್ತು. ಡಿ-ರಾಡಿಕಲೈಸೇಶನ್ ಕಾರ್ಯಕ್ರಮಗಳು ಯುವಜನರನ್ನು ಒಳಗೊಂಡಿದ್ದು, ಅವರು ತೀವ್ರವಾದ ಧಾರ್ಮಿಕ ದೃಷ್ಟಿಕೋನಗಳನ್ನು ಮತ್ತು ಐಎಸ್ ಸಿದ್ಧಾಂತದತ್ತ ಒಲವಿರುವವರನ್ನು ಗುರುತಿಸಿ ನೈಜತೆಯನ್ನು ಪರಿಚಯಿಸಿ, ಸಾಮಾನ್ಯ ಪರಿಸರಕ್ಕೆ ಸಿದ್ದಗೊಳಿಸುವ ಚಟುವಟಿಕೆಯಾಗಿದೆ.