ನವದೆಹಲಿ :ಸರಕಾರವು ಬುಧವಾರ (ಸೆಪ್ಟೆಂಬರ್ 15) ಸಾಲದ ಹೊರೆ ಹೊತ್ತಿರುವ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ಮಾರಾಟವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಏರ್ ಇಂಡಿಯಾ ಖರೀದಿಗೆ ಟಾಟಾ ಸಮೂಹ ತನ್ನ ಬಿಡ್ ಅನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.
ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಈ ಪ್ರಕ್ರಿಯೆಗೆ ಸೆಪ್ಟೆಂಬರ್ 15 ರ ಗಡುವು ನಿಗದಿಪಡಿಸಲಾಗಿದೆ ಹಾಗೂ ಬದಲಾಗುವುದಿಲ್ಲ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದರು.
ಪ್ರಸ್ತುತ, ಏರ್ ಇಂಡಿಯಾ ಸುಮಾರು 43,000 ಕೋಟಿ ರೂ. ಸಾಲವನ್ನು ಹೊಂದಿದ್ದು, ಅದರಲ್ಲಿ 22,000 ಕೋಟಿ ರೂ.ಗಳನ್ನು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (AIAHL) ಗೆ ವರ್ಗಾಯಿಸಲಾಗುವುದು.
ಸರಕಾರವು ವಿಮಾನಯಾನ ಸಂಸ್ಥೆಯಲ್ಲಿ 100 ಶೇ. ಪಾಲನ್ನು, ಗ್ರೌಂಡ್ ಹ್ಯಾಂಡ್ಲಿಂಗ್ ಕಂಪನಿ ಏರ್ ಇಂಡಿಯಾ ಸ್ಯಾಟ್ಸ್ ವಿಮಾನ ನಿಲ್ದಾಣ ಸೇವೆಗಳ ಖಾಸಗಿ ಲಿಮಿಟೆಡ್ (AISATS) ನಲ್ಲಿ 50 ಶೇ ಪಾಲು ಮಾರಾಟ ಮಾಡಲು ಯೋಜಿಸಿದೆ.
ಮುಂಬೈನ ಏರ್ ಇಂಡಿಯಾ ಕಟ್ಟಡ, ದಿಲ್ಲಿಯ ಏರ್‌ಲೈನ್ಸ್ ಹೌಸ್ ಸೇರಿದಂತೆ ಇತರ ಆಸ್ತಿಗಳು ಸಹ ಒಪ್ಪಂದದ ಭಾಗವಾಗಿರುತ್ತದೆ.