ಕಾಸರಗೋಡು: ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ದ್ವಿತೀಯ ಅಲೆಯ ವೇಳೆ ಸಂದರ್ಭೋಚಿತವಾಗಿ ನಡೆಸಿರುವ ಪ್ರತಿರೋಧ ಚಟುವಟಿಕೆಗಳು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ. ಇದರ ಪರಿಣಾಮ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಸೂಕ್ತ ಅವಧಿಯಲ್ಲಿ ಜನಜಾಗೃತಿ, ರೋಗಿಗಳಿಗೆ ಅಗತ್ಯವಾಗಿರುವ ಆಂಬುಲೆನ್ಸ್ ಸೇವೆ, ಔಷಧಗಳ ವಿತರಣೆ, ಸಿ.ಎಫ್.ಎಲ್.ಟಿ.ಸಿ. ಡೋಮಿಸಿಲಿಯರಿ ಕೇರ್ ಸೆಂಟರ್ ಆರಂಭ, ಲಸಿಕೆ ಶಿಬಿರಗಳು ಇತ್ಯಾದಿಗಳು ನಗರಸಭೆ ನಡೆಸಿರುವ ಮಾದರಿ ರೂಪದ ಚಟುವಟಿಕೆಗಳು.
ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಸೆಕ್ಟರಲ್ ಮೆಜಿಸ್ಟ್ರೇಟ್ ಗಳು, ಮಾಸ್ಟರ್ ಯೋಜನೆ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಜಾಗೃತಿ ಸಮಿತಿ ಸದಸ್ಯರು ಜಂಟಿಯಾಗಿ ನಡೆಸಿದ ಚಟುವಟಿಕೆಗಳು ಗಮನಸೆಳೆದುವು.
ಮಾದರಿ ಚಟುವಟಿಕೆ ನಡೆಸಿದ ಎಲ್ಲ ವಿಭಾಗದ ಕಾರ್ಯಕರ್ತರನ್ನು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿಸ್ ಪಚ್ಚಕ್ಕಾಡು ಅಭಿನಂದಿಸಿದರು.