ಮಂಜೇಶ್ವರ: ಬಂಗ್ರಮಂಜೇಶ್ವರ ಸರ್ಕಾರಿ ಫ್ರೌಢಶಾಲೆಯಲ್ಲಿ ಆನ್ ಲೈನ್ ತರಗತಿ ವೀಕ್ಷಿಸಲು ಸೌಲಭ್ಯಗಳಿಲ್ಲದ ವಿದ್ಯಾರ್ಥಿಗಳಿಗೆ ಮೊಬೈಲ್ ಪೋನ್ ವಿತರಿಸಲಾಯಿತು.
ಶಾಲಾ ಶಿಕ್ಷಕ ವೃಂದ, ನಿವೃತ್ತ ಮುಖ್ಯೋಪಾಧ್ಯಾಯಿನಿಯರು, ನಿವೃತ್ತ ಶಿಕ್ಷಕ-ಶಿಕ್ಷಕಿಯರು ಕೊಡುಗೆಯಾಗಿ ನೀಡಿದ ನೂತನ 15 ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘ ನೀಡಿದ ಎರಡು ಮೊಬೈಲ್ ಪೋನ್ ಗಳನ್ನು ವಿತರಿಸಲಾಯಿತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮೊಬೈಲ್ ಪೋನ್ ವಿತರಣೆಯನ್ನು ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್, ಬ್ಲಾಕ್ ಪಂಚಾಯತಿ ಸದಸ್ಯೆ ಸಂಶೀನ, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್, ನಿವೃತ್ತ ಮುಖ್ಯ ಶಿಕ್ಷಕಿ ಲೋಲಾಕ್ಷಿ, ಮಾತೃಸಂಘದ ಅಧ್ಯಕ್ಷೆ ಅಸ್ಮಾ, ಗಾಯತ್ರಿ ಟೀಚರ್, ಶಶಿಕಲಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ಶಬಾನಾ ಸ್ವಾಗತಿಸಿ, ಪ್ರತಿಭಾ ಟೀಚರ್ ವಂದಿಸಿದರು. ಸಿಲ್ವಿಯಾ ಟೀಚರ್ ನಿರೂಪಿಸಿದರು.