ನವದೆಹಲಿ: ನೂತನ ಗ್ರೀನ್ ಪೀಲ್ಡ್ ಹೆದ್ದಾರಿಗೆ ಸಂಬಂಧಿಸಿ ಕೇಂದ್ರ ಬಾಹ್ಯ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಭರವಸೆ ಲಭಿಸಿರುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿರುವರು. ಕೋಝಿಕ್ಕೋಡ್‍ನಿಂದ ಪಾಲಕ್ಕಾಡ್ ಮೂಲಕ ಕೊಯಮತ್ತೂರಿಗೆ ತೆರಳುವ ರಸ್ತೆ ಈ ಮೂಲಕ ನಿರ್ಮಾಣಗೊಳ್ಳುವ ಭರವಸೆ ಇದೆ. ರಾಜ್ಯ ಸರ್ಕಾರದಿಂದ ಯೋಜನೆಯ ಪ್ರಸ್ತಾವನೆ ಬಂದ ತಕ್ಷಣ ಕೇಂದ್ರವು ಈ ನಿಟ್ಟಿನಲ್ಲಿ ಅನುಕೂಲಕರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿ ಮುರಳೀಧರನ್ ಹೇಳಿದರು.
ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಮೈಸೂರು ಮತ್ತು ಕೋಝಿಕ್ಕೋಡ್ ನ್ನು ಸಂಪರ್ಕಿಸುವ ಪರ್ಯಾಯ ಮಾರ್ಗಕ್ಕೆ ನಿರ್ಮಾಣಕ್ಕೆ ಕೇಂದ್ರ ಉತ್ಸುಕವಾಗಿದೆ ಎಂದು ಗಡ್ಕರಿ ತಿಳಿಸಿದರು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕನ್ಯಾಕುಮಾರಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವನ್ನು ತ್ವರಿತಗೊಳಿಸುವಂತೆ ಕೇಂದ್ರ ಸಚಿವರು ಸೂಚಿಸಿದರು. ಇದಲ್ಲದೇ, ತಲಶ್ಶೇರಿ-ಮಾಹೆ-ವಡಕರ ಬೈಪಾಸ್ ಮತ್ತು ಕೋಝಿಕೋಡ್ ಬೈಪಾಸ್ ನಿರ್ಮಾಣವನ್ನು ತ್ವರಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು.
ಕೇಂದ್ರ ಮೇಲ್ಮೈ ಸಾರಿಗೆ ಸಚಿವಾಲಯವು ತಿರುವನಂತಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋವಳಂ ಕಾಂಜಿರಾಮಕುಳಂ ಪಂಚಾಯತ್‍ನ ಪ್ಲವಿಲಾ ಜಂಕ್ಷನ್‍ನಲ್ಲಿ ಕಾಜಿವೂರು ತಜಮಕಾಡು ರಸ್ತೆಯನ್ನು ಸಂಪರ್ಕಿಸುವ ಮೇಲ್ಸೇತುವೆಗೆ ಅನುಮತಿ ನೀಡಲಿದೆ. ನಿತಿನ್ ಗಡ್ಕರಿ ತನ್ನ ವಾರ್ಷಿಕ ಯೋಜನೆಯಲ್ಲಿ ಮೇಲ್ಸೇತುವೆಯನ್ನು ಸೇರಿಸಲು ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮುರಳೀಧರನ್ ಹೇಳಿದರು.
ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಅಧಿಕಾರಿಗಳೊಂದಿಗೆ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ವಿ.ಮುರಳೀಧರನ್ ಜೊತೆಗೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಸೀಬ್ ಅಹ್ಮದ್, ಉಪಾಧ್ಯಕ್ಷ ನಿತ್ಯಾನಂದ ಕಾಮತ್, ಕಾರ್ಯದರ್ಶಿ ಮಹಬೂಬ್ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ. ರಘುನಾಥ್ ಮತ್ತು ಕೋಝಿಕ್ಕೋಡ್ ಕಾಪೆರ್Çರೇಷನ್ ಕೌನ್ಸಿಲರ್ ನವ್ಯಾ ಹರಿದಾಸ್ ಸೇರಿದಂತೆ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ತಂಡದಲ್ಲಿದ್ದರು.