HEALTH TIPS

ಅಮೆರಿಕದ ಹರ್ಬಲ್ ಫಾರ್ಮಾ ಜೊತೆ ಕೈಜೋಡಿಸಿದ ಭಾರತ

                 ಜಾಗತಿಕವಾಗಿ ಆಯುರ್ವೇದ ಮತ್ತು ಇತರ ಭಾರತೀಯ ಸಂಪ್ರದಾಯಿಕ ಔಷಧ ಉತ್ಪನ್ನಗಳ ಗುಣಮಟ್ಟವನ್ನು ಬಲವರ್ಧನೆಗೊಳಿಸಲು ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷವಾಗಿ ಅಮೆರಿಕಾ ಮಾರುಕಟ್ಟೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದನ್ನು ಭಾರತೀಯ ಔಷಧ ಮತ್ತು ಹೋಮಿಯೋಪಥಿ ಫಾರ್ಮಕೋಪಿಯಾ ಆಯೋಗ (ಪಿಸಿಐಎಂ&ಎಚ್) ಮತ್ತು ಅಮೆರಿಕಾದ ಅಮೆರಿಕನ್ ಹರ್ಬಲ್ ಫಾರ್ಮಾಕೋಪಿಯಾ ನಡುವೆ 2021ರ ಸೆಪ್ಟಂಬರ್ 13ರಂದು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಾಧಿಸಲಾಗಿದೆ.


               ಈ ಒಪ್ಪಂದಕ್ಕೆ ವರ್ಚುವಲ್ ರೂಪದಲ್ಲಿ ಸಹಿ ಹಾಕಲಾಗಿದೆ ಮತ್ತು ಆಯುಷ್ ಸಚಿವಾಲಯ, ಸಮಾನತೆ ಮತ್ತು ಪರಸ್ಪರ ಪ್ರಯೋಜನವಾಗುವ ಆಧಾರದಲ್ಲಿ ಎರಡೂ ದೇಶಗಳ ನಡುವೆ ಆಯುರ್ವೇದ ಮತ್ತು ಭಾರತೀಯ ಸಂಪ್ರದಾಯಿಕ ವೈದ್ಯ ಪದ್ದತಿಗಳ ಔಷಧಗಳಲ್ಲಿ ಗುಣಮಟ್ಟ ಅಭಿವೃದ್ಧಿಪಡಿಸುವುದು ಮತ್ತು ಬಲವರ್ಧನೆ ಮತ್ತು ಉತ್ತೇಜನಗೊಳಿಸುವ ನಿರ್ದಿಷ್ಠ ಉದ್ದೇಶಗಳನ್ನು ಇಟ್ಟುಕೊಂಡು ಒಡಂಬಡಿಕೆಯನ್ನು ಮಾಡಿಕೊಂಡಿದೆ.

                  ಈ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಆಯುಷ್ ಮತ್ತು ಹೋಮಿಯೋಪಥಿ ( ಆಯುರ್ವೇದ, ಸಿದ್ಧಾ, ಯುನಾನಿ ಮತ್ತು ಹೋಮಿಯೋಪಥಿ) ಔಷಧಗಳ ರಫ್ತು ಸಾಮರ್ಥ್ಯ ವೃದ್ಧಿಗೆ ದೀರ್ಘಕಾಲ ನೆರವಾಗಲಿವೆ. ಈ ಒಪ್ಪಂದದಡಿಯಲ್ಲಿ ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಮೋನೊಗ್ರಾಫ್ ಮತ್ತು ಇತರ ಚಟುವಟಿಕೆಗಳ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಜಂಟಿ ಸಮಿತಿಯನ್ನು ರಚಿಸಲಾಗುವುದು.

            ಈ ಒಪ್ಪಂದದಿಂದಾಗಿ ಆಯುಷ್ ಮತ್ತು ಹೋಮಿಯೋಪಥಿ ಔಷಧಗಳ ಸುರಕ್ಷತೆ ಬಗ್ಗೆ ಜಾಗತಿಕ ಸಮುದಾಯದಲ್ಲಿ ವಿಶ್ವಾಸ ವೃದ್ಧಿಯಾಗಲಿದೆ ಎಂಬ ಭಾವನೆಯನ್ನು ಸಚಿವಾಲಯ ವ್ಯಕ್ತಪಡಿಸಿದೆ. ಪಿಸಿಐಎಂ&ಎಚ್ ಮತ್ತು ಅಮೆರಿಕಾದ ಎಎಚ್ ಪಿ ನಡುವಿನ ಈ ಪಾಲುದಾರಿಕೆಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ಅಮೆರಿಕಾದಲ್ಲಿ ಆಯುರ್ವೇದ ಉತ್ಪನ್ನಗಳು/ಔಷಧಗಳ ಒಳಗೊಂಡ ಹರ್ಬಲ್ ಮಾರುಕಟ್ಟೆ ಎದುರಿಸುತ್ತಿರುವ ನಾನಾ ಬಗೆಯ ಸವಾಲುಗಳನ್ನು ಗುರುತಿಸುವುದಾಗಿದೆ. ಇದು ಅಮೆರಿಕಾದಲ್ಲಿ ಗಿಡಮೂಲಿಕೆ ಔಷಧಗಳ ತಯಾರಕರ ಸಹಕಾರದಿಂದ ಅಭಿವೃದ್ದಿಪಡಿಸಿರುವ ಆಯುರ್ವೇದ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ಇದನ್ನು ಒಂದು ಪ್ರಮುಖ ಕ್ರಮವೆಂದು ಕರೆಯಬಹುದು ಮತ್ತು ಅಂತಿಮವಾಗಿ ಅಮೆರಿಕಾದಲ್ಲಿ ಆಯುಷ್ ಮತ್ತು ಹೋಮಿಯೋಪಥಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾನ್ಯತೆ ಪಡೆಯಲು ಈ ಸಹಕಾರದಿಂದ ಅಭಿವೃದ್ಧಿಪಡಿಸಿದ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುವುದು.

                  ಆಯುರ್ವೇದ ಮತ್ತು ಇತರೆ ಭಾರತೀಯ ಸಂಪ್ರದಾಯಿಕ ಔಷಧ ಉತ್ಪನ್ನಗಳು ಮತ್ತು ಗಿಡಮೂಲಿಕೆ ಉತ್ಪನ್ನಗಳ ಮ್ಯಾಮೋಗ್ರಾಫ್ ಅಭಿವೃದ್ಧಿಪಡಿಸುವುದು, ಉಭಯ ಪಕ್ಷಗಳ ಅಧಿಕೃತ ಸಮ್ಮತಿ ಮೇರೆಗೆ ಮ್ಯಾಮೋಗ್ರಾಫ್ ಅಭಿವೃದ್ಧಿಯ ತಾಂತ್ರಿಕ ದತ್ತಾಂಶಗಳನ್ನು ವಿನಿಮಯ ಮಾಡಿಕೊಳ್ಳುವುದು, ತರಬೇತಿ ಮತ್ತು ಸಾಮರ್ಥ್ಯವೃದ್ಧಿ , ಹರ್ಬೇರಿಯಂ ಮಾದರಿಗಳ ವಿನಿಮಯ ಹಾಗೂ ಸಸ್ಯಶಾಸ್ತ್ರೀಯ ಮಾದರಿಗಳ ಉಲ್ಲೇಖ, ಫೋಟೋ ಕೆಮಿಕಲ್ ಉಲ್ಲೇಖದ ಮಾನದಂಡಗಳು ಒಪ್ಪಂದದ ಭಾಗವಾಗಿವೆ. ಆಯುರ್ವೇದ ಮತ್ತು ಇತರೆ ಭಾರತೀಯ ಸಂಪ್ರದಾಯಿಕ ಉತ್ಪನ್ನಗಳು/ಔಷಧಗಳು ಮತ್ತು ಗಿಡಮೂಲಿಕೆ ಉತ್ಪನ್ನಗಳ ಡಿಜಿಟಲ್ ದತ್ತಾಂಶ ಅಭಿವೃದ್ಧಿ ಮತ್ತು ಇತರ ಭಾರತೀಯ ಸಂಪ್ರದಾಯಿಕ ಔಷಧಗಳಲ್ಲಿ ಬಳಸುವ ಔಷಧಗಳು/ಉತ್ಪನ್ನಗಳ ಗುಣಮಟ್ಟ ಮಾನದಂಡಗಳ ಪ್ರಚಾರಕ್ಕಾಗಿ ಸಹಕಾರದ ಮತ್ತಷ್ಟು ಕ್ಷೇತ್ರಗಳನ್ನು ಗುರುತಿಸುವುದು ಒಪ್ಪಂದದ ಭಾಗವಾಗಿದೆ.

           ಭಾರತ ಮತ್ತು ಅಮೆರಿಕಾ ನಡುವಿನ ಈ ಒಪ್ಪಂದವು ಆಯುರ್ವೇದ ಮತ್ತು ಇತರೆ ಭಾರತೀಯ ಸಂಪ್ರದಾಯಿಕ ಉತ್ಪನ್ನಗಳ ಒಳನಾಡು ಮತ್ತು ಜಾಗತಿಕ ಗುಣಮಟ್ಟವನ್ನು ಬಲಪಡಿಸಲು ಆಯುಷ್ ಸಚಿವಾಲಯದ ಮುಂದುವರಿದ ಉಪಕ್ರಮಗಳಿಗೆ ಮತ್ತಷ್ಟು ವೇಗವನ್ನು ನೀಡುವ ಸಕಾಲಿಕ ಹೆಜ್ಜೆಯಾಗಿದೆ. ಆಯುರ್ವೇದ ಮತ್ತು ಇತರೆ ಆಯುಷ್ ಔಷಧಗಳು, ಈ ಶತಮಾನದಲ್ಲಿ ಪ್ರಮುಖ ಕೊಲೆಗಾರಾರೆಂದು ಹೇಳುತ್ತಿರುವ ಜೀವನಶೈಲಿ ಅಸ್ವಸ್ಥತೆಗಳನ್ನು ನಿಭಾಯಿಸುವಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಲಿವೆ.

            ಅಲ್ಲದೆ, ಸೋಂಕು ಹರಡುವುದನ್ನು ತಡೆಯುವಲ್ಲಿ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಆಯುಷ್ ಮತ್ತು ಹೋಮಿಯೋಪಥಿ ಔಷಧಗಳ ಪಾತ್ರವನ್ನು ಸಾಕ್ಷ್ಯ ಸಹಿತ ದೃಢಪಟ್ಟಿದೆ ಮತ್ತು ಅದು ನಿಜಕ್ಕೂ ಪ್ರಸಂಶೆಗೆ ಅರ್ಹವಾಗಿದೆ. ಭಾರತವು ವ್ಯಾಪಕ ಲಭ್ಯತೆ, ಕೈಗೆಟುವುದು ಮತ್ತು ಸುರಕ್ಷತೆ ಹಾಗೂ ಜನರ ವಿಶ್ವಾಸ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಸಾಂಪ್ರದಾಯಿಕ ಆರೋಗ್ಯ ರಕ್ಷಣಾ ದೊಡ್ಡ ಜಾಲವನ್ನು ಹೊಂದಿದೆ. ಜಾಗತಿಕವಾಗಿ ಇದರ ಮಾನ್ಯತೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವ್ಯವಸ್ಥೆಗಳ ಪ್ರಚಾರ ಮತ್ತು ಉತ್ತೇಜನಕ್ಕಾಗಿ ಕಾರ್ಯನಿರ್ವಹಿಸುವುದು ಆಯುಷ್ ಸಚಿವಾಲಯಕ್ಕೆ ಕಡ್ಡಾಯವಾಗಿದೆ.

             ಈ ಒಪ್ಪಂದದ ಮೂಲಕ ಇಬ್ಬರೂ ಸಹಯೋಗಿಗಳು ಆಯುರ್ವೇದ ಮತ್ತು ಇತರೆ ಭಾರತೀಯ ಸಾಂಪ್ರದಾಯಿಕ ಔಷಧ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಮಾನದಂಡಗಳ ಪಾತ್ರವನ್ನು ಗುರುತಿಸಲು ಪ್ರಯತ್ನಿಸಲಿವೆ. ಜೊತೆಗೆ ಸಾಂಪ್ರದಾಯಿಕ/ ಗಿಡಮೂಲಿಕೆ ಔಷಧಿಗಳ ಗುಣಮಟ್ಟ ಮತ್ತು ಅವುಗಳ ಉತ್ಪನ್ನಗಳ ಅರಿವು ಮತ್ತು ಜಾಗೃತಿ ಹೆಚ್ಚಳವನ್ನು ಖಾತ್ರಿಪಡಿಸುತ್ತದೆ. (ಆಯುಷ್ ಸಚಿವಾಲಯದ ಪ್ರಕಟಣೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries